ಬೆಂಗಳೂರು: ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಸದ್ಯ ಈಗ ಯಶ್ ಸ್ವತಃ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ರಾಜಮೌಳಿ ನಿರ್ದೇಶಿಸುತ್ತಿರುವ ಮಲ್ಟಿ ಸ್ಟಾರರ್ ‘ಆರ್ಆರ್ಆರ್’ ಚಿತ್ರದಲ್ಲಿ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ ಸ್ವತಃ ಯಶ್ ತಮ್ಮ ಫೇಸ್ಬುಕ್ನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಕೆಲ ಮಾಧ್ಯಮಗಳಲ್ಲಿ ನನ್ನನ್ನು ಎಸ್.ಎಸ್ ರಾಜಮೌಳಿಯವರು ಸಂಪರ್ಕಿಸಿದ್ದಾರೆ. ಅವರ ಹೊಸ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂದು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ನಾನು ಅವರ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅವರು ಆ ವಿಚಾರವಾಗಿ ನನ್ನ ಸಂಪರ್ಕಿಸಿಯೂ ಇಲ್ಲ. ಅಂತಹ ದೊಡ್ಡ ನಿರ್ದೇಶಕರ ಹೆಸರನ್ನು ಹೀಗೆ ಸುಖಾಸುಮ್ಮನೆ ಬಳಸುವುದು ಸರಿಯಲ್ಲ. ಅದು ಯಾರಿಗೂ ಶೋಭೆ ತರುವಂತಹದಲ್ಲ.
Advertisement
ಸದ್ಯಕ್ಕೆ ನನ್ನ ಗುರಿ ಕೆ.ಜಿ.ಎಫ್. ಕೆ.ಜಿ.ಎಫ್ ಕೆಲಸದಲ್ಲಿ ನಾನು ನನ್ನ ತಂಡ ಮಗ್ನರಾಗಿದ್ದೀವಿ. ದಯವಿಟ್ಟು ಊಹಾಪೋಹಗಳಿಗೆ ಕಿವಿಕೊಡದಿರಿ.ಸುಳ್ಳುಸುದ್ದಿಯನ್ನು ಬಿತ್ತರಿಸದಿರಿ. ಈಗ ಕೆ.ಜಿ.ಎಫ್ ಬರುತಿರುವಂತಹ ಸಮಯ. ಬರೀ ಈ ಚಿತ್ರದ ಬಗ್ಗೆ ಮಾತಾಡೋಣ. ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.
Advertisement
ಆರ್ಆರ್ಆರ್ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಎನ್ಟಿಆರ್ ಅಭಿನಯಿಸುತ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv