ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ತಾರಾಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್‌ಗೆ ಇಂದು 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ.
ಬೆಳ್ಳಂಬೆಳಗ್ಗೆ ಟಾಕ್ಸಿಕ್ ಚಿತ್ರದ ಕುರಿತು ಮಹಾ ಅಪ್‌ಡೇಟ್ ಕೊಟ್ಟಿದ್ದ ಯಶ್ ತಮ್ಮ ಸ್ಪೆಷಲ್ ದಿನವನ್ನ ಜೀವನ ಸಂಗಾತಿ ಜೊತೆಗೆ ಕಳೆಯುತ್ತಿದ್ದಾರೆ. ಇನ್ನು ತಮ್ಮ ಜೀವನದ ಭಾಗವಾಗಿರುವ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಯಶ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ವಿಭಿನ್ನ ಫೋಟೋಗಳನ್ನ ಹಂಚಿಕೊಂಡು ಮದುವೆ ಆನಿವರ್ಸರಿಯ ಶುಭಾಶಯ ಕೋರಿದ್ದಾರೆ.ಇದನ್ನೂ ಓದಿ: ನಟಿ ಜಯಶ್ರೀಯಾದ ತಮನ್ನಾ ಭಾಟಿಯಾ
ಯಾವಾಗಲೂ ಹಾಗೂ ಎಲ್ಲದಕ್ಕೂ ನೀವೇ ಉತ್ತರವಾಗಿರುತ್ತೀರಿ ಎಂದು ಯಶ್ ಜೊತೆಗಿನ ಪೋಟೋ ಹಂಚಿಕೊಂಡು ಸರ್ವಸ್ವ ಅನ್ನೋದನ್ನ ಹೇಳಿಕೊಂಡಿದ್ದಾರೆ. ಈ ಮೂಲಕ ರಾಧಿಕಾ 9ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ.



