ಬೆಂಗಳೂರು: ಚುನಾವಣೆ ಸಮಯದಲ್ಲಿ ಸ್ಯಾಂಡಲ್‍ವುಡ್ ನ ರಾಂಕಿಂಗ್ ಸ್ಟಾರ್ ಯಶ್ ತಮ್ಮ ರಾಜಕೀಯದ ನಿಲುವಿನ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಸ್ಯಾಂಡಲ್‍ವುಡ್ ನಟರಾದ ಶಿವಣ್ಣ, ಸುದೀಪ್, ದರ್ಶನ್, ಉಪೇಂದ್ರ ಸೇರಿದಂತೆ ಅನೇಕ ನಟರು ರಾಜಕೀಯಕ್ಕೆ ಸಂಬಂಧಪಟ್ಟಂತೆ ತಮ್ಮ ನಿಲ್ಲುವನ್ನ ಸ್ಪಷ್ಟಪಡಿಸಿದ್ದಾರೆ. ಆದರೆ ಯಶ್ ಮಾತ್ರ ತಮ್ಮ ನಿಲ್ಲುವನ್ನ ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಆದರೆ ಈಗ ತಾವು ರಾಜಕೀಯಕ್ಕೆ ಬರುವುದರ ಬಗ್ಗೆ ಹೇಳಿದ್ದಾರೆ.
Advertisement
Advertisement
ನಟ ಯಶ್ ಕಲ್ಲಿನಂತ ಕಷ್ಟದಲ್ಲಿ ಅರಳಿದ ಪ್ರತಿಭಾವಂತ. ನುಡಿದಂತೆ ನಡೆಯುವ ನಾಯಕ. ಯಶ್ ಸಿನಿಮಾಗಳ ಮೂಲಕ ಎಷ್ಟು ಪ್ರಖ್ಯಾತರೋ ಅಷ್ಟೇ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಈಗಾಗಲೇ ಯಶೋಮಾರ್ಗದ ಮೂಲಕ ಅದ್ಭುತ ಕಾರ್ಯಕ್ಕೆ ಮುಂದಾಗಿದ್ದಾರೆ. ಬಾಯಾರಿಕೆಯಲ್ಲಿ ಬಳಲಿದ್ದ ಕೊಪ್ಪಳ್ಳ ಜಿಲ್ಲೆಯ ತಲ್ಲೂರು ಗ್ರಾಮಕ್ಕೆ ಭಗೀರಥನಾಗಿದ್ದು, ಉತ್ತರ ಕರ್ನಾಟದ ಹಳ್ಳಿಗಳಿಗೆ ಬರಗಾಲ ಬಂದಾಗ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಂತಹ ವಿಚಾರಗಳನ್ನ ಮನಗಂಡ ರಾಜಕೀಯ ಪಕ್ಷಗಳು ಯಶ್‍ರನ್ನ ಚುನಾವಣಾ ಪ್ರಚಾರಕ್ಕೆ ದಾಳವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದ್ದವು. ಅನೇಕ ಅವಕಾಶಗಳು ರಾಜಕೀಯ ಪಕ್ಷಗಳಿಂದ ಯಶ್‍ಗೆ ಬಂದಿದ್ದವು. ಆದ್ರೆ ಯಶ್ ಯಾವುದಕ್ಕೂ ಒಪ್ಪಿರಲಿಲ್ಲ.
Advertisement
ಈ ಬಗ್ಗೆ ಮಾಧ್ಯಮಗಳ ಜೊತೆ ಮಾನನಾಡಿದ ಅವರು, ವಿಧಾನಸಭೆಗೆ ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂಬ ಆಸೆ ನನಗಿದೆ. ಆದರೆ ನಾನೇ ಈ ಬಾರಿ ಚುನಾವಣಾ ಕಣಕ್ಕೆ ಇಳಿಯಲಾರೆ. ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲಾರೆ. ರಾಜಕೀಯಕ್ಕೆ ಬರುವಂತೆ ಅನೇಕರು ನನ್ನನ್ನು ಒತ್ತಾಯ ಮಾಡುತ್ತಿರುವುದು ನಿಜ. ಆದರೆ ಸದ್ಯಕ್ಕೆ ನಾನು ಅಂಥ ಯಾವುದೇ ಯೋಚನೆ ಹೊಂದಿಲ್ಲ. ನಟನಾಗಿದ್ದುಕೊಂಡೇ ಜನರಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
Advertisement
ಕೆಲವೇ ದಿನಗಳಲ್ಲಿ ಕರ್ನಾಟಕದ ತುಂಬ ಚುನಾವಣೆಯ ಕಾವು ಬಲು ಜೋರಾಗಲಿದೆ. ಈ ಸಮಯದಲ್ಲಿ ರಾಜಕೀಯ ಪಕ್ಷದವರು ಸಿನಿಮಾ ನಟ-ನಟಿಯರನ್ನ ಮುಂದಿಟ್ಟುಕೊಂಡು ಪ್ರಚಾರ ನಡಿಸಲು ಮುಂದಾಗಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ದರ್ಶನ್, ಸುದೀಪ್, ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕ ಸ್ಟಾರ್ ನಟರ ಹೆಸರನ್ನು ಚುನಾವಣ ಪ್ರಚಾರದ ಪ್ರಣಾಳಿಕೆಗಳ ಮುಖಪುಟದಲ್ಲಿ ಪ್ರಿಂಟ್ ಮಾಡಲು ಅಣಿಯಾಗುತ್ತಿದ್ದಾರೆ.
ಪ್ರಸ್ತುತ ಯಶ್ ದಕ್ಷಿಣ ಭಾರತದ ಬಹುನಿರೀಕ್ಷಿತ ಕೆ.ಜಿ.ಎಫ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸಿನಿಮಾ ತೆರೆಕಾಣಲಿದೆ.