ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಐದು ರಾಕೆಟ್ ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಇಬ್ಬರು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ಹೊಣೆಯನ್ನು ಇದುವರೆಗೂ ಯಾರು ಹೊತ್ತುಕೊಂಡಿಲ್ಲ. ಓರ್ವ ಭದ್ರತಾ ಸಿಬ್ಬಂದಿ ಹೇಳುವಂತೆ ರಾಯಭಾರಿ ಕಚೇರಿಯ ಕಾಂಪೌಂಡ್ ಬಳಿ ಮೂರು ಕತ್ಯೂಶ ರಾಕೆಟ್ ನಿಂದ ದಾಳಿಯಾಗಿದೆ ಎಂದಿದ್ದಾರೆ. ಆದ್ರೆ ಮತ್ತೋರ್ವ ಸಿಬ್ಬಂದಿ ಐದು ರಾಕೆಟ್ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಪ್ರಾಣಾಪಾಯ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Advertisement
Five rockets hit near US embassy in Iraq capital, reports AFP news agency quoting security source.
— ANI (@ANI) January 26, 2020
Advertisement
ಇದಕ್ಕೂ ಮುನ್ನ ಜನವರಿ 20ರಂದು ಬಾಗ್ದಾದ್ ನ ಗ್ರೀನ್ ಝೋನ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದಿತ್ತು. ಜನವರಿ ಮೂರರಂದು ಅಮೆರಿಕ ಡ್ರೋನ್ ದಾಳಿಯ ಮೂಲಕ ಇರಾನ್ ಸೇನೆಯ ಕಮಾಂಡರ್ ಜನರಲ್ ಖಾಸೀಂ ಸುಲೈಮಾನ್ ನನ್ನು ಹೊಡೆದುರಳಿಸಿತ್ತು. ಅಂದಿನಿಂದ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಏರ್ಪಟ್ಟಿದೆ.