– ಇಸ್ರೇಲ್ ಮೇಲಿನ ದಾಳಿಗೆ 1 ವರ್ಷ
ಬೈರೂತ್: ಗಾಜಾಪಟ್ಟಿಯಲ್ಲಿ (Gaza Strip) ನಿರಾಶ್ರಿತರ ಶಿಬಿರವಾಗಿ ಪರಿವರ್ತನೆಯಾಗಿದ್ದ ಮಸೀದಿಯೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, 26 ಮಂದಿ ಬಲಿಯಾಗಿದ್ದಾರೆ. ಈ ಬೆನ್ನಲ್ಲೇ ಹಮಾಸ್ ಕೂಡ ಕೌಂಟರ್ ಅಟ್ಯಾಕ್ ಮಾಡಿದೆ. ಇಸ್ರೇಲ್ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿದೆ.
ಅಕ್ಟೋಬರ್ 7ರ ದಾಳಿಗೆ ಒಂದು ವರ್ಷ ತುಂಬುವುದಕ್ಕೆ ಒಂದು ದಿನ ಮೊದಲು ಈ ಘಟನೆ ನಡೆದಿದೆ. ಹಲವಾರು ಸ್ಪೋಟಕಗಳನ್ನು ಹೊತ್ತ ರಾಕೆಟ್‌ವೊಂದು ಉತ್ತರ ಗಾಜಾಪಟ್ಟಿಯಿಂದ ಇಸ್ರೇಲ್‌ಗೆ Israel) ನುಗ್ಗುತ್ತಿರುವುದನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಜಾತಿ ಗಣತಿ ವರದಿ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿ ಆಮೇಲೆ ನೋಡೋಣ – ಪರಮೇಶ್ವರ್
Advertisement
Advertisement
ಭಾನುವಾರ ಮಧ್ಯಾಹ್ನವಷ್ಟೇ ಗಾಜಾ ಪಟ್ಟಿಯ ದೀರ್ ಅಲ್ – ಬಾಲಾಹ್ ನಗರದ ಕೇಂದ್ರ ಭಾಗದಲ್ಲಿ ಇದ್ದ ಮಸೀದಿ ಮೇಲೆ ಇಸ್ರೇಲ್ ದಾಳಿ ನಡೆಸಿ 26 ಜನರ ಹತ್ಯೆಗೈದಿತ್ತು. ಈ ಮಸೀದಿಯ ಒಳಗೆ ಹಮಾಸ್ ಉಗ್ರರ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರ ಇತ್ತು ಎಂದು ಇಸ್ರೇಲ್ ಸೇನೆ ಹೇಳಿಕೊಂಡಿತ್ತು. ಇದೇ ಕಾರಣಕ್ಕಾಗಿ ದಾಳಿ ನಡೆಸಿದ್ದಾಗಿ ಸಮರ್ಥನೆ ಮಾಡಿಕೊಂಡಿತ್ತು. ಈ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳು ಇಸ್ರೇಲ್ ಕಡೆಗೆ ಹೊರಟಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಬದುಕು ಇರೋದು ನಿಮ್ಮ ಋಣ ತೀರಿಸೋಕೆ, ನಿಮ್ಮ ಮನೆ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ: ಹೆಚ್‌ಡಿಕೆ ಭಾವುಕ
Advertisement
Advertisement
ಮಸೀದಿಯಲ್ಲಿ ಗಾಯಾಳುಗಳ ಆಕ್ರಂದನ!
ಇಸ್ರೇಲ್ ನಡೆಸಿದ ದಾಳಿಯಲ್ಲಿ 26 ಮಂದಿ ಬಲಿಯಾಗುವ ಜೊತೆಯಲ್ಲೇ ನೂರಾರು ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಇದ್ದ ಗಾಯಾಳುಗಳನ್ನು ಸಮೀಪದ ಅಲ್ – ಅಕ್ಸಾ ಹುತಾತ್ಮರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಂಬ್ ದಾಳಿಯಿಂದ ಧ್ವಂಸಗೊಂಡ ಮಸೀದಿಯ ಒಳಗಿನಿಂದ ಗಾಯಾಳುಗಳನ್ನ ಹೊರ ತೆಗೆಯೋದೇ ಹರ ಸಾಹಸ ಆಗಿತ್ತು ಎಂದು ಆಸ್ಪತ್ರೆಯ ವಕ್ತಾರ ಮೊಹಮ್ಮದ್ ಬಸ್ಸಾಲ್ ಹೇಳಿದ್ದಾರೆ. ಬಹುತೇಕ ಗಾಯಾಳುಗಳಿಗೆ ಆಸ್ಪತ್ರೆಯ ಒಳಗೆ ಬೆಡ್ ಸಿಗದ ಕಾರಣ ಆಸ್ಪತ್ರೆಯ ಮುಂಭಾಗದ ಗೇಟ್ ಬಳಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಇಸ್ರೇಲ್ ಮೇಲೆ ಹಮಾಸ್ ದಾಳಿಗೆ 1 ವರ್ಷ:
2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನೂರಾರು ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಈ ಕರಾಳ ಘಟನೆ 1 ವರ್ಷ ಒಂದು ವರ್ಷ ಪೂರೈಸಿದಂತಾಗಿದೆ. ಒಂದು ವರ್ಷಗಳ ಅವಧಿಯಲ್ಲಿ ಗಾಜಾ ಪಟ್ಟಿಯಲ್ಲಿ ಸುಮಾರು 50 ಸಾವಿರ ಮಂದಿ ಸಾವನ್ನಪ್ಪಿದಂತಾಗಿದೆ. ಅಕ್ಟೋಬರ್ 7ರ ದಾಳಿಯ ಕಹಿ ನೆನಪಿನ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಕೂಡಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಹಿಂಸಾಚಾರದ ಕಹಿ ನೆನಪನ್ನು ಈ ವಿಡಿಯೋದಲ್ಲಿ ಬಿಂಬಿಸಲಾಗಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಕೂಡಾ ಪ್ರತಿ ದಾಳಿ ನಡೆಸಿ ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಾ ಬಂದಿದೆ. ಈ ಸಮರದಲ್ಲಿ ಸಾವಿರಾರು ಪ್ಯಾಲಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರ ನಿಲ್ಲಬೇಕು ಎಂದು ಆಗ್ರಹಿಸಿರುವ ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಶಾಂತಿಯ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?