– ಅಕ್ರಮವಾಗಿ ಸ್ಫೋಟಕ ಬಳಸಿರುವ ಶಂಕೆ
ತುಮಕೂರು: ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಫೋಟಗೊಂಡು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ಈ ಘಟನೆ ಜಿಲ್ಲೆಯ ಪಾವಗಡ (Pavagada) ತಾಲೂಕಿನ ತಿರುಮಣಿ ಬಳಿ ನಡೆದಿದೆ.
Advertisement
ಮೃತ ಕಾರ್ಮಿಕನನ್ನು ರಾಯಚೂರು ಮೂಲದ ಬಸವರಾಜ್ (46) ಹಾಗೂ ಗಾಯಳುವನ್ನು ಕಾರ್ಮಿಕನನ್ನು ಶಿವಯ್ಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮುಡಾ ಕೇಸ್ ಸಿಬಿಐಗೆ ವರ್ಗಾಯಿಸಲು ಮನವಿ – ಆದೇಶ ಕಾಯ್ದಿರಿಸಿದ ಕೋರ್ಟ್
Advertisement
Advertisement
ತಿರುಮಣಿ ಬಳಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಸ್ಥಳದಲ್ಲಿದ್ದ ಬಂಡೆ ಸ್ಫೋಟಿಸುವಾಗ ಈ ದುರಂತ ಸಂಭವಿಸಿದೆ. ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಬಂಡೆಯನ್ನು ಸ್ಫೋಟಿಗೊಳಿಸಲು ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು, ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಕನ್ನಡ ಹೋರಾಟಗಾರರ ಮೇಲಿನ ಎಲ್ಲಾ ಕೇಸ್ ವಾಪಸ್ – ಸಿಎಂ ಘೋಷಣೆ