ನವದೆಹಲಿ: ಕ್ರಿಕೆಟರ್ ರಾಬಿನ್ ಉತ್ತಪ್ಪ ಹಾಗೂ ಶೀತಲ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಷಯವನ್ನ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಮಗು ಹಾಗೂ ಪತ್ನಿ ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ.
ನಮ್ಮ ಮಗು ನೈಲಿ ನೋಲನ್ ಉತ್ತಪ್ಪ ಆಗಮಿಸಿದ್ದಾನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಅಂತ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಬಹುಕಾಲದ ಪ್ರೇಯಸಿಯಾಗಿದ್ದ ಮಾಜಿ ಟೆನ್ನಿಸ್ ಆಟಗಾರ್ತಿ ಶೀತಲ್ ಅವರನ್ನ ಉತ್ತಪ್ಪ ಕಳೆದ ವರ್ಷ ಮಾರ್ಚ್ ನಲ್ಲಿ ಮದುವೆಯಾಗಿದ್ದರು.
ಉತ್ತಪ್ಪ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಕಳೆದ 15 ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಟವಾಡಿದ್ದ ಉತ್ತಪ್ಪ, ಪ್ರಸ್ತುತ ಸೀಜನ್‍ನಲ್ಲಿ ಸೌರಾಷ್ಟ್ರದ ಪರವಾಗಿ ಆಟವಾಡಲು ಆಯ್ಕೆ ಮಾಡಿಕೊಂಡಿದ್ದಾರೆ.
Our bundle of joy has arrived!! NEALE NOLAN UTHAPPA???? thank you for all the love and support!! #whentwobecomethree #batmenandjoker pic.twitter.com/4FwRbzfj7Y
— Robin Aiyuda Uthappa (@robbieuthappa) October 11, 2017