ರಾಬರ್ಟ್ (Robert), ಉಪಾಧ್ಯಕ್ಷ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇದೀಗ ರೇಣುಕಾಸ್ವಾಮಿ ಪ್ರಕರಣದ (Renukaswamy Murder Case) ಕುರಿತು ರಿಯಾಕ್ಟ್ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ನೀಡಲಿ. ತಪ್ಪು ಮಾಡಿಲ್ಲ ಅಂದರೆ ಪ್ರಕರಣದಿಂದ ಆಚೆ ಬರಲಿ ಎಂದು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ರಿವೀಲ್ – ಕಣ್ಣೀರಿಡುತ್ತ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಸ್ವಾಮಿ
ಸುದ್ದಿಗೋಷ್ಠಿಯೊಂದರಲ್ಲಿ ದರ್ಶನ್ ಬಗ್ಗೆ ಉಮಾಪತಿ (Umapathy Srinivas) ಪ್ರತಿಕ್ರಿಯಿಸಿ, ಮಾನವೀಯತೆಯಿಂದ ನೋಡೋದಾದ್ರೆ ಮಾಡಿದ್ದು ಖಂಡಿತಾ ತಪ್ಪು. ದರ್ಶನ್ (Darshan) ಪ್ರಕರಣದ ಕುರಿತು ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ ಸತ್ಯಾಸತ್ಯತೆ ಆಚೆ ಬರುತ್ತದೆ. ಇನ್ನೂ ನಾನು ಯಾರ ಶೋಲ್ಡರ್ ಮೇಲೂ ಗನ್ ಇಟ್ಟು ಹೊಡಿಯೋಕೆ ಹೋಗಲ್ಲ. ಏನೇ ಇದ್ದರೂ ನೇರಾನೇರ ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ
ನನಗೆ ಬಗ್ಗೆ ಯಾರೋ ಕಾಮೆಂಟ್ ಮಾಡಿದರು. ನಾನು ಹೋಗಿ ದೂರು ಕೊಟ್ಟೆ ಅಷ್ಟೇ. ಒಂದು ಹಾಳೆ ಪೆನ್‌ನಲ್ಲಿ ಆಗುವ ಕೆಲಸವಿದು. ನಾನು ಸಾಧಿಸೋಕೆ ಅಂತ ಹುಟ್ಟಿದ್ದೀವಿ ಸಾಯೋದಕ್ಕೆ ಅಲ್ಲ. ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ ಮಾಡಿಲ್ಲ ಅಂದರೆ ಆಚೆ ಬರಲಿ. ಕಾಮೆಂಟ್ ಮಾಡಿದ ಅನ್ನೋ ವಿಚಾರಕ್ಕೆ ಹೀಗೆ ಕ್ರೌರ್ಯ ಮಾಡಿರೋದ್ರಿಂದ ಎಷ್ಟು ಕುಟುಂಬ ಇಂದು ಅನಾಥವಾಗಿದೆ. ದರ್ಶನ್ ನನಗೆ ವೈರಿಯಂತಲ್ಲ. ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದರು.
ಈ ವೇಳೆ, ಮೀಟೂ ಪ್ರಕರಣದ ಬಗ್ಗೆ ಉಮಾಪತಿ ಮಾತನಾಡಿ, ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡಿದ್ದೀವಿ. ಯಾರನ್ನ ಬೇಕಾದ್ರೂ ವಿಚಾರಿಸಬಹುದು. ಯಾರ ಮನೆಯ ಹೆಣ್ಮಕ್ಕಳು ಆದ್ರೂ ನಮ್ಮ ಮನೆಯ ಹೆಣ್ಮಕ್ಕಳು ಇದ್ದಂತೆ ನೋಡಿಕೊಂಡಿದ್ವಿ. ಹೆಣ್ಮಕ್ಕಳಿಗೆ ನಮ್ಮ ಸೆಟ್‌ನಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದ್ದೇವೆ ಎಂದರು. ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರೂ ಹಾಗೆ ಇರುವುದಿಲ್ಲ. ಕೆಲವರಿಗೆ ಬದುಕಿನ ಬುತ್ತಿಯೇ ಇಂಡಸ್ಟ್ರಿ ಆಗಿದೆ. ಕೇರಳದ ಹೇಮಾ ತರದ ಕಮಿಟಿ ಬೇಕು ಬೇಡ ಅಂತ ಹೇಳುವುದಲ್ಲ. ಇದರಲ್ಲಿ ಪಬ್ಲಿಸಿಟಿ ಮಾಡಿಕೊಳ್ಳಬಾರದು. ಇದು ಕಾರ್ಯ ರೂಪಕ್ಕೆ ಬರಬೇಕು ಎಂದಿದ್ದಾರೆ.