ಬೆಂಗಳೂರು: ಸಾರಿ (Sorry) ಕೇಳುವ ನೆಪದಲ್ಲಿ ವಿದೇಶಿ ಪ್ರಜೆಗಳನ್ನು ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಸೈಯ್ಯದ್ ಯಾಸೀನ್ (26) ಬಂಧಿತ ಆರೋಪಿಯಾಗಿದ್ದು, ಈತನನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸ (Banasavadi Police) ರಿಂದ ಬಂಧಿಸಿದ್ದಾರೆ.
Advertisement
Advertisement
ಆರೋಪಿಗಳಾದ ಸೈಯ್ಯದ್ ಯಾಸೀನ್ ಮತ್ತು ಮಹಮ್ಮದ್ ಮನ್ಸೂರ್ ತಡರಾತ್ರಿ ರೋಡಿಗಿಳಿಯುತ್ತಿದ್ದರು. ಒಂಟಿಯಾಗಿ ಓಡಾಡೋ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸುತ್ತಿದ್ದರು. ನಂತರ ಕಾರನ್ನು ಓವರ್ ಟೇಕ್ ಮಾಡಿ, ಸಾರಿ ಕೇಳುವ ನೆಪದಲ್ಲಿ ಕಾರಿನಲ್ಲಿ ಯಾರಿದ್ದಾರೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದರು. ಒಂಟಿಯಾಗಿಯಾಗಿರೋದು ಗೊತ್ತಾದ ತಕ್ಷಣ ಮೊಬೈಲ್ (Mobile), ಪರ್ಸ್ (Purse) ಹಣದ ಜೊತೆಗೆ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನೂ ಓದಿ: ಕಾರವಾರದಲ್ಲಿ ನಿಂತಲ್ಲೇ ನಿಂತ ಪಶು ಅಂಬುಲೆನ್ಸ್
Advertisement
Advertisement
ಆರೋಪಿಗಳು ನವೆಂಬರ್ 11 ರಂದು ಸುಡಾನ್ ದೇಶದ ಪ್ರಜೆಗೆ ಚಾಕು ತೋರಿಸಿ ಕಾರನ್ನ ಕದ್ದೊಯ್ದಿದ್ದರು. ಚಾಕು ತೋರಿಸಿ ಹ್ಯೂಂಡೈ ವರ್ನಾ ಕಾರನ್ನ ಕದ್ದೊಯ್ದಿದ್ದರು. ಈ ಸಂಬಂಧ ಸುಡಾನ್ ಪ್ರಜೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ನಾಪತ್ತೆಯಾಗಿರೋ ಮಹಮ್ಮದ್ ಮನ್ಸೂರ್ ಗಾಗಿ ಖಾಕಿ ಹುಡುಕಾಟ ನಡೆಸಲಾಯಿತು. ಸದ್ಯ ಬಂಧಿತನಿಂದ 2 ಲಕ್ಷ ಮೌಲ್ಯದ ಒಂದು ಹ್ಯೂಂಡೈ ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.