ಗುರುಗಾಂವ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಮನೆಯಲ್ಲಿ 70,000 ರೂ. ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎಂದು ಅವರ ತಾಯಿ ಆರೋಪಿಸಿದ್ದಾರೆ.
ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಾಯಿ ಶುಕ್ರವಾರ ಪಂಚಕುಲದ ಮಾನಸಾ ದೇವಿ ಕಾಂಪ್ಲೆಕ್ಸ್‌ನಲ್ಲಿರುವ ಅವರ ಮನೆಯಲ್ಲಿದ್ದ ನಗದು ಮತ್ತು ಆಭರಣಗಳನ್ನು ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?
Advertisement
Advertisement
ತಾಯಿ ಶಬ್ನಮ್ ಸಿಂಗ್ ಅವರು ತಮ್ಮ ಮನೆಯಲ್ಲಿದ್ದ 70,000 ಸಾವಿರ ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2029ರಲ್ಲಿ ಆಪ್‌ನಿಂದ ಬಿಜೆಪಿ ಮುಕ್ತ – 3ನೇ ಬಾರಿ ವಿಶ್ವಾಸಮತ ಗೆದ್ದ ಕೇಜ್ರಿವಾಲ್
Advertisement
ಸಿಬ್ಬಂದಿ ಸಾಕೇತ್ರಿಯ ಲಲಿತಾ ದೇವಿ, ಮನೆಕೆಲಸಕ್ಕಾಗಿ ಮತ್ತು ಅಡುಗೆ ಕೆಲಸಕ್ಕಾಗಿ ನೇಮಕಗೊಂಡ ಬಿಹಾರ ಮೂಲದ ವ್ಯಕ್ತಿ ಸಲೀಂದರ್ ದಾಸ್ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ
Advertisement
2023ರಲ್ಲಿ ಗುರುಗಾಂವ್‌ನಲ್ಲಿದ್ದಾಗ ಒಂದು ತಿಂಗಳು ತಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ನಮ್ಮ ಮನೆಯ ಜವಾಬ್ದಾರಿಯನ್ನು ಆರೋಪಿಗಳಾಗಿರುವ ಮನೆಗೆಲಸದವರು ನೋಡಿಕೊಳ್ಳುತ್ತಿದ್ದರು. ನಂತರ ಇಬ್ಬರು ಆರೋಪಿಗಳು ಕೆಲಸವನ್ನು ಬಿಟ್ಟ ಆರು ತಿಂಗಳ ಬಳಿಕ ಮನೆಯಲ್ಲಿದ್ದ ಅಷ್ಟೂ ಚಿನ್ನ ಮತ್ತು ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ
ಈ ಕುರಿತು ಗುರುವಾರ (ಫೆ.15) ರಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ