ಬೆಂಗಳೂರು: ಒಂಟಿ ಮನೆಗೆ ದರೋಡೆ (Robbery) ಮಾಡಲು ನುಗ್ಗಿದ್ದ ಗ್ಯಾಂಗ್ (Gang) ಒಂದು ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆಯಾದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ (Bengaluru) ಅವಲಹಳ್ಳಿಯ ಶಾಂತಿನಿವಾಸ ಲೇಔಟ್ನಲ್ಲಿ ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ದೋಚಲು ಟೆರೇಸ್ ಮೇಲಿಂದ ಮನೆಗಿಳಿದ ಕತರ್ನಾಕ್ ಕಳ್ಳರ ಗ್ಯಾಂಗ್ ಒಂದು ಅಂದರ್ ಆದ ಕಥೆಯಿದು. ಕತರ್ನಾಕ್ ಕಳ್ಳರ ಗ್ಯಾಂಗ್ ಮನೆಯ ಬಗ್ಗೆ ಸಕಲ ಮಾಹಿತಿ ಪಡೆದು, ಅನೇಕ ದಿನಗಳ ಕಾಲ ಸ್ಕೇಚ್ ಹಾಕಿ ಮನೆಯಲ್ಲಿ ಮನೆ ಮಾಲೀಕರಿರೋದು ಗೊತ್ತಿದ್ದು, ಸಕಲ ಸಲಕರಣೆಗಳೊಂದಿಗೆ ದರೋಡೆಗೆ ಮುಂದಾಗಿತ್ತು. ಮನೆಗೆ ನುಗ್ಗಿದ್ದು ಐವರಾದ್ರೆ ಉಳಿದಿಬ್ಬರು ರೋಡ್ನಲ್ಲಿ ನಿಂತು ಯಾರಾದರೂ ಬರ್ತಾರ ಅಂತ ನೋಡುತ್ತಿದ್ದರು. ದರೋಡೆಕೋರರು ಮನೆಗೆ ನುಗ್ಗಿರುವ ಅರಿವಿಲ್ಲದೆ ಎಂದಿನಂತೆ 5 ಗಂಟೆಗೆ ಮನೆ ಮಂದಿ ನಿದ್ದೆಯಿಂದ ಎದ್ದಿದ್ದರು. ಈ ವೇಳೆ ತಂದೆಗೆ ಟೀ ಮಾಡಿಕೊಡಲು ಎದ್ದ ಮಗನ ಕಣ್ಣಿಗೆ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳು ಕಂಡಿದೆ. ಏನೀದು ಮನೆಗೆ ಯಾರೋ ಬಂದಿದ್ದಾರೆ, ಎನೋ ಅಚಾತುರ್ಯ ಆಗುತ್ತಿದೆ ಅಂತಾ ಮನೆಯ ಪರಿಸ್ಥಿತಿ ನೋಡಿ ಒಮ್ಮೆ ಶಾಕ್ ಆಗಿದ್ದಾನೆ. ಇದನ್ನೂ ಓದಿ: ಕೋರಮಂಗಲ ಕಿಡ್ನಾಪ್ ಸ್ಟೋರಿಗೆ ಟ್ವಿಸ್ಟ್- ಹಣಕ್ಕಾಗಿ ಅಪಹರಿಸಿ ಹುಡುಗಿಗಾಗಿ ಡಿಮ್ಯಾಂಡ್
ಬಳಿಕ ಮನೆಯಲ್ಲಿರೋದೆ ಮೂರು ಜನ ಯಾರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದೆಂದು ನೋಡಲು ಅನುಮಾನದಿಂದ ಮೊಬೈಲ್ನಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದ್ದಾನೆ. ಸಿಸಿಟಿವಿ ನೋಡ್ತಿದ್ದಂತೆ ಮನೆಯ ಮೂಲೆ ಮೂಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕಳ್ಳರ ಗ್ಯಾಂಗ್ ನಿಂತಿತ್ತು. ಕೂಡ್ಲೇ ಎಚ್ಚೆತ್ತ ಹುಡುಗ ಮೆಲ್ಲಗೆ ದರೋಡೆಕೋರರು ಒಂದು ಕೋಣೆಗೆ ಹೋಗೊವರೆಗೂ ಕಾದು ಕುಳಿತಿದ್ದಾನೆ ಅವ್ರು ಒಂದು ಕೋಣೆಗೆ ಹೋಗ್ತಿದ್ದಂತೆ ರೂಂ ಡೋರ್ ಲಾಕ್ ಮಾಡಿ ಕೂಡಿ ಹಾಕಿದ್ದಾನೆ. ಇದನ್ನೂ ಓದಿ: ಕನ್ನಡ ಮಾತಾಡಿದ ಯುವತಿಗೆ ಕೇರಳ ಯುವತಿ ಹಲ್ಲೆ- ಒಂದೇ ಪಿಜಿಯಲ್ಲಿದ್ರೂ ಭಾಷಾ ತಾರತಮ್ಯ
ಬಳಿಕ ಭೀತಿಯಲ್ಲಿ ಮತ್ತೊಂದು ರೂಂಗೆ ತೆರಳಿ 112ಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾನೆ. ಕರೆ ಬರುತ್ತಿದ್ದಂತೆ ಹತ್ತು ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ತಲಘಟ್ಟಪುರ ಪೊಲೀಸರು ಮನೆಯನ್ನು ಸುತ್ತುವರಿದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಇದೀಗ 7 ಮಂದಿಯ ಗ್ಯಾಂಗ್ ಕಂಬಿ ಎಣಿಸುತ್ತಿದ್ದು ತನಿಖೆ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k