ಬೆಂಗಳೂರು: ಕಳ್ಳತನ ಮಾಡಿದ್ದ ಎಎಸ್‌ಐ ಬೈಕನ್ನೇ ಬಳಸಿಕೊಂಡು ಹೆದ್ದಾರಿಗಳಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸುಹೇಲ್, ಆದಿ, ಧನುಷ್ ಸೇರಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಕಾಮಾಕ್ಷಿಪಾಳ್ಯ ಎಎಸ್‌ಐ ನಾಗರಾಜ್ ಬೈಕನ್ನು ಕಳ್ಳತನ ಮಾಡಿದ್ದರು. ಅದನ್ನೇ ದರೋಡೆ ಬಳಸಿಕೊಳ್ಳುತ್ತಿದ್ದರು. ಎಎಸ್‌ಐ ಗಾಡಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!
Advertisement
Advertisement
ಆರೋಪಿಗಳನ್ನು ಮೊಬೈಲ್ ದೋಚುತ್ತಿದ್ದರು. ಅದರ ಪಾಸ್‌ವರ್ಡ್ ಕೂಡ ಪಡೆದು ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಕಳೆದ ತಿಂಗಳು 28 ರಂದು ಎಎಸ್‌ಐ ದ್ವಿಚಕ್ರ ವಾಹನ ಕದ್ದಿದ್ದರು.
Advertisement
ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಎಸ್‌ಐ ಬೈಕ್ ಬಳಸಿ ಕಳೆದ ತಿಂಗಳು 31 ರಂದು ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗಗೆ ಹೋಗುತ್ತಿದ್ದ ಕ್ಯಾಂಟರ್‌ನ ತಡೆದು ಆರೋಪಿಗಳು ಮೊಬೈಲ್ ದೋಚಿದ್ದರು. ಈ ಸಂಬಂಧ ಕ್ಯಾಂಟರ್ ಚಾಲಕ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ
Advertisement
ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ಕ್ಯಾಂಟರ್ ಚಾಲಕನಿಗೆ ಚಾಕುವಿನಿಂದ ಚುಚ್ಚಿ ಮೊಬೈಲ್ ಕಸಿದಿದ್ದರು. ನಂತರ ಆತನಿಂದಲೇ ಪಾಸ್‌ವರ್ಡ್ ಪಡೆದು ಹಣ ದೋಚಿದ್ದರು. ಮೊಬೈಲ್ ದೋಚಿದವನ ವಿಚಾರಣೆ ವೇಳೆ, ಎಎಸ್‌ಐ ಬೈಕ್ ಕಳ್ಳತನ ಬಯಲಿಗೆ ಬಂದಿದೆ.
ಪ್ರಕರಣ ಸಂಬಂಧ ಆರು ಜನರನ್ನ ಬಂಧಿಸಿ 3.40 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ 6 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.