ಮಂಡ್ಯ: ಕೆಲ ತಿಂಗಳು ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೈಲೆಂಟ್ ಆಗಿದ್ದ ಹೈವೇ ದರೋಡೆಕೋರರು ಇದೀಗ ಮತ್ತೆ ಆ್ಯಕ್ಟಿವ್ ಆಗುವ ಮೂಲಕ ಪೊಲೀಸರ ನಿದ್ದೆಗೆಡಿಸಿದ್ದಾರೆ. ಈ ದರೋಡೆಕೋರರು ಕೇವಲ ಕೇರಳ ವಾಹನಗಳನ್ನು ಮಾತ್ರ ಟಾರ್ಗೆಟ್ ಮಾಡಿರುವುದು ಮತ್ತಷ್ಟು ಆತಂಕ ಹುಟ್ಟಿಸಿದೆ.
ಇತ್ತಿಚ್ಚೀನ ದಿನಗಳಲ್ಲಿ ನಿಯತ್ತಾಗಿ ದುಡಿದು ಬದುಕು ಸಾಗಿಸುತ್ತೇವೆ ಎಂದು ಜನರು ಅಂದುಕೊಂಡ್ರು. ಆದರೆ ಖದೀಮರು ಅವರ ನೆಮ್ಮದಿ ಜೀವನದಲ್ಲಿ ತಮ್ಮ ಕಿರಾತಕ ಬುದ್ಧಿಯ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬಿರುಗಾಳಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹದ್ದೆ ಗ್ಯಾಂಗ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಕ್ಟಿವ್ ಆಗಿದ್ದು, ಕೇರಳದ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ಮಾಡುವ ಕೃತ್ಯಕ್ಕೆ ಮುಂದಾಗಿದ್ದಾರೆ. ಮಂಡ್ಯ ಜಿಲ್ಲೆಯ ಹಳೆಬೂದನೂರು ಬಳಿ ಹೈವೇಯಲ್ಲಿ ಒಂದು ತಿಂಗಳಿನಿಂದ ಎರಡು ದರೋಡೆಗಳು ಜರುಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ: ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ
Advertisement
Advertisement
ಕೇರಳ ವಾಹನ ಟಾರ್ಗೆಟ್
ಈ ದರೋಡೆಕೋರರು ಕೇರಳದ ವಾಹನಗಳನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಿಂದ ಕೇರಳಗೆ ಹೋಗುತ್ತಿದ್ದ ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರ ಬಳಿಯಿದ್ದ ಒಂದು ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಕೇರಳದ ಮತ್ತೊಂದು ವಾಹನ ಅಡ್ಡಗಟ್ಟಿ ಖದೀಮರು ಮತ್ತೊಂದು ದರೋಡೆ ನಡೆಸಿದ್ದಾರೆ.
Advertisement
Advertisement
ಕೇರಳದ ಆಭರಣ ಅಂಗಡಿಯ ಮಾಲೀಕ ಲಕ್ಷ್ಮಣ್ ತಮ್ಮ ಸಂಬಂಧಿಕರಾದ ನಿಲೇಶ್ ಮತ್ತು ಋಷಿಕೇಶ್ ಅವರನ್ನು ಬೆಂಗಳೂರಿನ ತನ್ನ ಸ್ನೇಹಿತನಿಂದ 20 ಲಕ್ಷ ರೂ. ಹಣವನ್ನು ಸಾಲ ತೆಗೆದುಕೊಂಡು ಬರುವಂತೆ ಕಳುಹಿಸಿದ್ದಾರೆ. ನಿಲೇಶ್ ಮತ್ತು ಋಷಿಕೇಶ್ ಬೆಂಗಳೂರಿನಿಂದ 20 ಲಕ್ಷ ರೂ. ತೆಗೆದುಕೊಂಡು ಕೇರಳಗೆ ಹೋಗುವಾಗ ಮಂಡ್ಯದ ಹೊಸಬೂದನರು ಬಳಿ ಹೈವೇ ರಾಬರಿ ಮಾಡುವವರು ಖದೀಮರು ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಬಳಿಕ ಖದೀಮರು ಕುಣಿಗಲ್ ಬಳಿ ಕಾರನ್ನು ಬಿಟ್ಟು ಕಾರಿನಲ್ಲಿ ಇದ್ದ 20 ಲಕ್ಷ ರೂ. ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವು
ಇದೀಗ ಮಂಡ್ಯ ಎಸ್‍ಪಿ ಯತೀಶ್ ಅವರು ಖದೀಮರ ಸೆರೆಗೆ ಡಿವೈಎಸ್‍ಪಿ ಮಂಜುನಾಥ್ ನೇತೃತ್ವದಲ್ಲಿ ಪ್ರತ್ಯೇಕ 7 ತಂಡಗಳನ್ನು ರಚಿಸಿದ್ದಾರೆ.