ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru Mysuru Exprpessway) ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲ್ಲೇ ಇದೆ. ಇದೀಗ ಈ ಹೆದ್ದಾರಿಯಲ್ಲಿ ದರೋಡೆ ಗ್ಯಾಂಗ್ ಒಂದು ಆಕ್ಟಿವ್ ಆಗಿದ್ದು, ರಾತ್ರಿ ವೇಳೆ ವಿಶ್ರಾಂತಿಗೆ ಎಂದು ವಾಹನ ನಿಲ್ಲಿಸಿದವರಿಂದ ಹಣ, ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗುತ್ತಿದೆ. ಕಳೆದ ಶನಿವಾರ ರಾತ್ರಿ ವೇಳೆ ಈ ಹೆದ್ದಾರಿಯಲ್ಲಿ 2 ಗಂಟೆಯ ಅಂತರದಲ್ಲಿ 2 ದರೋಡೆ ನಡೆದಿವೆ.
ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಈ 2 ಘಟನೆಗಳು ಜರುಗಿವೆ. ಅಂದು ರಾತ್ರಿ 1 ಗಂಟೆ ವೇಳೆ ನಗುವನಹಳ್ಳಿ ಬಳಿ ಉಡುಪಿ ಮೂಲದ ಶಿವಪ್ರಸಾದ್ ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಪ್ರವಾಸಕ್ಕಾಗಿ ಈ ದಂಪತಿ ಮಕ್ಕಳೊಂದಿಗೆ ಮೈಸೂರಿಗೆ ತೆರಳಿದ್ದರು.
Advertisement
Advertisement
ಹೋಟೆಲ್‌ಗಳಲ್ಲಿ ಕೊಠಡಿ ಸಿಗದ ಕಾರಣ ಎಕ್ಸ್‌ಪ್ರೆಸ್ ವೇನಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದರೋಡೆಕೋರರು (Robbers) ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ನಡೆದ 2 ಗಂಟೆ ಅವಧಿಯಲ್ಲಿ ಮತ್ತೊಂದು ದರೋಡೆ ಇದೇ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನರ್ಸಿಂಗ್ ವಿದ್ಯಾರ್ಥಿನಿಗೆ ಹೃದಯಾಘಾತ
Advertisement
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೋಲಾರದ ಡಾ. ರಕ್ಷಿತ್ ರೆಡ್ಡಿ ಡಾ. ಮಾನಸ ದಂಪತಿ ಈ ವೇಳೆ ಗೌರಿಪುರ ಬಳಿ ಕಾರಿನ ಟೈರ್ ಪಂಕ್ಚರ್ ಆಗಿದೆ. ಈ ಸಂದರ್ಭದಲ್ಲಿ ಇವರು ಟೈರ್ ಬದಲಿಸುತ್ತಿದ್ದಾಗ ಚಾಕು ತೋರಿಸಿ 40 ಗ್ರಾಂ ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಮಂಡ್ಯ ಎಸ್‌ಪಿ ಎನ್. ಯತೀಶ್ ಭೇಟಿ ನೀಡಿ ಚಿನ್ನಾಭರಣ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಮುಂದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ರೀತಿ ಪ್ರಕರಣ ಜರುಗದ ರೀತಿ ಮಂಡ್ಯ ಪೊಲೀಸ್ ಇಲಾಖೆ ಕ್ರಮವಹಿಸಿದೆ. ಇದನ್ನೂ ಓದಿ: ಕಾಂಬೋಡಿಯಾ ಪ್ರವಾಸ ಮುಗಿಸಿ ಹೆಚ್‍ಡಿಕೆ ವಾಪಸ್- ವಿದೇಶದಲ್ಲೇ ಇರಿ ಎಂದ ಸಚಿವರಿಗೆ ಟಾಂಗ್
Web Stories