ದಾವಣಗೆರೆ: ಬಂಗಾರದ ಲೋನ್ ರಿನಿವಲ್ (Gold Loan Renewal) ಮಾಡಲು ಬಂದಿದ್ದ ಮಹಿಳೆಯ ಹಣ ಎಗರಿಸಿ ಕಳ್ಳಿಯರು ಎಸ್ಕೇಪ್ ಆದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರು ಕೆನರಾ ಬ್ಯಾಂಕ್‌ನಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ಲತಾ ಬಂಗಾರದ ಸಾಲ ನವೀಕರಣಕ್ಕೆಂದು ಪತಿಯೊಂದಿಗೆ ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಪೆನ್ ನೀಡುವ ನೆಪದಲ್ಲಿ ಲತಾ ಬಳಿ ಇದ್ದ 3.5 ಲಕ್ಷ ರೂ. ಅನ್ನು ಖತರ್ನಾಕ್ ಕಳ್ಳಿಯರು ಎಗರಿಸಿದ್ದಾರೆ. ಕಳ್ಳಿಯರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ವಿದೇಶಗಳಲ್ಲಿ ಆಸ್ತಿ ಮಾಡಿದ್ರೆ ಸರ್ಕಾರಕ್ಕೆ ಬರೆದುಕೊಡುವೆ – ಇಡಿ ದಾಳಿಗೊಳಗಾಗಿದ್ದ ಶಾಸಕ ಸುಬ್ಬಾರೆಡ್ಡಿ ಸವಾಲ್
ಹಣ ಕಳುವಾಗಿದೆ ಎಂದು ಅರಿತುಕೊಂಡ ಲತಾ ದಂಪತಿ ಕೂಡಲೇ ಎಚ್ಚೆತ್ತುಕೊಂಡು ಮದ್ಯ ಪ್ರದೇಶ ಮೂಲದ ಇಬ್ಬರನ್ನು ಹಿಡಿದು ಅವರ ಬಳಿ ಇದ್ದ ಎರಡೂವರೆ ಲಕ್ಷ ರೂ. ಹಣ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಒಂದು ಲಕ್ಷ ರೂ.ನೊಂದಿಗೆ ಮತ್ತೊಬ್ಬ ಕಳ್ಳಿ ಎಸ್ಕೇಪ್ ಆಗಿದ್ದಾಳೆ. ಸಂತೆಬೆನ್ನೂರು ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನಡೆಸುತ್ತಿದ್ದು, ಮತ್ತೊಬ್ಬಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು