ಹಾಡಹಗಲೇ ಸೇಲ್ಸ್ ಮ್ಯಾನ್‍ಗೆ ಡ್ರ್ಯಾಗರ್ ತೋರಿಸಿ ದರೋಡೆ ಮಾಡಿದ್ರು

Public TV
1 Min Read
AMRUTH HALLI

ಬೆಂಗಳೂರು: ಹಾಡುಹಗಲೇ ಸೇಲ್ಸ್ ಮ್ಯಾನ್ ಒಬ್ಬರಿಗೆ ಡ್ರ್ಯಾಗರ್ ತೋರಿಸಿ ಹೆದರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆಬ್ಬಾಳದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬುಧವಾರ ಮಧ್ಯಾಹ್ನ ಅಂಗಡಿಯೊಂದರ ಮುಂದೆ ಸೇಲ್ಸ್ ಮ್ಯಾನ್ ನಿಂತಿದ್ದರು. ಆ ಸ್ಥಳಕ್ಕೆ ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ಚುಚ್ಚುವುದಾಗಿ ಹೆದರಿಸಿ ಅವರ ಕೈಯಲ್ಲಿದ್ದ 40 ಸಾವಿರ ರೂ. ಹಣದ ಬ್ಯಾಗ್ ಹಾಗೂ ಮೊಬೈಲ್ ದೋಚಿದ್ದಾರೆ.

AMRUTHA GHALLI 2

ಈ ವೇಳೆ ಸ್ಥಳದಲ್ಲಿದ್ದ ಜನರು ಅಸಹಾಯಕ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದರು. ಒಬ್ಬನ ಕೈಯಲ್ಲಿ ಡ್ರ್ಯಾಗರ್ ಇದ್ದು ಇನ್ನೊಬ್ಬ ಹಾಗೇ ಬರಿಗೈಯಲ್ಲಿ ಇದ್ದನು. ಅಲ್ಲಿಯೇ ನಿಂತಿದ್ದ ಒಬ್ಬ ಇವರನ್ನು ಹಿಡಿಯಲು ಮುಂದಾದಾಗ ಅವರಿಗೆ ಚುಚ್ಚಲು ಮುಂದಾದಂತೆ ಮಾಡಿ ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಹೆಲ್ಮೆಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳ ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿದೆ.

AMRUTHA GHALLI 3

AMRUTHA GHALLI 4

AMRUTHA GHALLI 1

Share This Article