ಚೆನ್ನೈ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮೂವತ್ತೆರಡು ಕೆಜಿ ಚಿನ್ನಾಭರಣವನ್ನು ಖದೀಮರು ಲೂಟಿ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ನಗರದ ಅರುಂಬಕ್ಕಂ ಪ್ರದೇಶದಲ್ಲಿರುವ ಫೆಡ್‍ಬ್ಯಾಂಕ್ ಗೋಲ್ಡ್ ಲೋನ್‍ನಲ್ಲಿ ದರೋಡೆ ಮಾಡಲು ಮಾಸ್ಕ್ ಧರಿಸಿ ನುಗ್ಗಿದ ಕಳ್ಳರು ಸ್ಟ್ರಾಂಗ್ ರೂಮ್‍ನ ಕೀಗಳನ್ನು ತೆಗೆದುಕೊಂಡು ಮೂವರು ಬ್ಯಾಂಕ್ ಉದ್ಯೋಗಿಗಳನ್ನು ಶೌಚಾಲಯದಲ್ಲಿ ಬೀಗ ಹಾಕಿ ಕೂಡಿಹಾಕಿದ್ದಾರೆ. ನಂತರ ಕ್ಯಾರಿ ಬ್ಯಾಗ್‍ನಲ್ಲಿದ್ದ 32 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಂಕರ್ ಜೀವಲ್ ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಸೆಕ್ಯುರಿಟಿ ಗಾರ್ಡ್, ಕಳ್ಳರು ನನಗೆ ನೀಡಿದ ತಂಪು ಪಾನೀಯವನ್ನು ಸೇವಿಸಿದ ನಂತರ ನಾನು ಪ್ರಜ್ಞಾಹೀನನಾಗಿದ್ದೇನೆ. ಎಲ್ಲರೂ ಈಗ ಚೆನ್ನಾಗಿದ್ದಾರೆ. ಯಾವುದೇ ಉದ್ಯೋಗಿ ಪ್ರಜ್ಞಾಹೀನವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ
ಈ ದರೋಡೆಯನ್ನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೇ ನಡೆಸಿರಬಹುದು ಎಂಬ ಅನುಮಾನವನ್ನು ಜಂಟಿ ಪೊಲೀಸ್ ಆಯುಕ್ತ ಟಿಎಸ್ ಅನ್ಬು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ