CrimeLatestLeading NewsMain PostNational

UP ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಓಲೆ ಕದ್ದ ಕಳ್ಳರು

ಲಕ್ನೋ: ಬಿಜೆಪಿ (BJP) ಶಾಸಕ ಪ್ರದೀಪ್ ಚೌಧರಿ (Pradeep Chaudhary) ಅವರ 80 ವರ್ಷದ ತಾಯಿಯ ಕಿವಿ ಕತ್ತರಿಸಿ ಕಿವಿಯೋಲೆಗಳನ್ನು ದೋಚಿರುವ ಭಯಾನಕ ಘಟನೆ ಉತ್ತರಪ್ರದೇಶದ (Uttarpradeh) ಗಾಜಿಯಾಬಾದ್‌ನಲ್ಲಿ ನಡೆದಿದೆ.

ಕಿವಿಯಿಂದ ಎಷ್ಟು ಎಳೆದರೂ ಓಲೆಗಳು ಬರುತ್ತಿಲ್ಲವೆಂದು ಕಟ್ಟರ್‌ನಿಂದ ಕಿವಿಗಳನ್ನೇ ಕತ್ತರಿಸಿ ಓಲೆಗಳನ್ನು ದೋಚಿರುವ ಘಟನೆ ಗಾಜಿಯಾಬಾದ್‌ನ ವಿಜಯನಗರ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿಂದು ನಡೆದಿದೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

ಇಲ್ಲಿಗೆ ಸಮೀಪದಲ್ಲೇ ಇರುವ ಪ್ರತಾಪ್ ವಿಹಾರ್‌ನಲ್ಲಿ ಶಾಸಕನ ತಾಯಿ ಸಂತೋಷ್ ದೇವಿ ಅವರು ವಾಯುವಿಹಾರಕ್ಕೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಶಾಸಕನ ಸಹೋದರ ಜೀತ್‌ಪಾಲ್ ಚೌದರಿ ತಿಳಿಸಿದ್ದಾರೆ.

ಏನಿದು ಘಟನೆ? – ಇಂದು ಬೆಳಗ್ಗೆ ಸಂತೋಷ್ ದೇವೆ ವಾಯುವಿಹಾರಕ್ಕಾಗಿ ಹೋಗುತ್ತಿದ್ದರು. ಇಲ್ಲಿನ ಡಿಪಿಎಸ್ ವೃತ್ತದ ಬಳಿ ಹೋಗುತ್ತಿರಬೇಕಾದರೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಗೆ ಚಾಕು ತೋರಿಸಿ ಚಿನ್ನ, ಕಿವಿಯೋಲೆಗಳನ್ನು ಕೊಡುವಂತೆ ಒತ್ತಾಯಿಸಿದ್ದಾರೆ. ಆಕೆ ಜೋರಾಗಿ ಕೂಗಿದ್ದರಿಂದ ಕಿವಿಯೋಲೆ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ, ಕಿವಿ ಸಮೇತ ಹಿಡಿದು ಎಳೆದಾಡಿದ್ದಾರೆ. ಆದರೂ ಓಲೆ ಬಂದಿಲ್ಲ. ಕೊನೆಗೆ ಕಟ್ಟರ್‌ನಿಂದ ಕಿವಿಗಳನ್ನೇ ಕತ್ತರಿಸಿ ಓಲೆಯನ್ನು ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

ಬಳಿಕ ಅಜ್ಜಿಯ ಚೀರಾಟದ ಕೇಳಿ ಅಲ್ಲಿಗೆ ಧಾವಿಸಿದ ಸ್ಥಳೀಯರು ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಪೊಲೀಸರು ಸಂತೋಷ್ ದೇವಿ ಅವರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Live Tv

Leave a Reply

Your email address will not be published.

Back to top button