ಪಣಜಿ: ಎಟಿಎಂಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಎಟಿಎಂ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ದರೋಡೆಕೋರ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಮುಖ ಸಿಸಿಟಿಯಲ್ಲಿ ಸರಿಯಾಗಿ ಕಂಡಿಲ್ಲ.
Advertisement
ಸಿಸಿಟಿವಿಯಲ್ಲಿ ಏನಿದೆ?: ಸುಮಾರು 40 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ದರೋಡೆ ಮಾಡಲೆಂದು ವ್ಯಕ್ತಿಯೊಬ್ಬ ಮುಖ ಕಾಣಿಸದಂತೆ ಮಾಸ್ಕ್ ಹಾಕಿಕೊಂಡು ನುಗ್ಗಿದ್ದನು. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಎಟಿಎಂ ಕೊಠಡಿಯ ಒಳಗೆ ತೆರಳಿ ಯಾವುದೇ ಆಯುಧಗಳಿಲ್ಲದೇ ಆತನ ಮೇಲೆ ದಾಳಿ ಮಾಡಿದ್ದಾರೆ. ತನ್ನ ಕಳ್ಳತನದ ವಿಚಾರ ತಿಳಿದ ಸೆಕ್ಯೂರಿಟಿ ಗಾರ್ಡ್ ಮೇಲೆ ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದಿದೆ.
Advertisement
ಸೆಕ್ಯೂರಿಟಿ ಗಾರ್ಡ್ ಘಟನೆಯಿಂದ ಗಾಯಗೊಂಡ್ರೂ ಕೂಡ ದರೋಡೆಕೋರನ ಮುಖದಲ್ಲಿರೋ ಮಾಸ್ಕ್ ತೆಗೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ಆತನ ಕೈಯಲಿದ್ದ ಸುತ್ತಿಗೆಯನ್ನು ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರ ಹಲವು ಬಾರಿ ಸೆಕ್ಯೂರಿಟಿಯ ತೆಲೆಗೆ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಕೆಳಗೆ ಬಿದ್ದಿದ್ದಾರೆ. ಆದ್ರೂ ಬಿಡದೆ ಸೆಕ್ಯೂರಿಟಿ ದರೋಡೆಕೋರನ ಮುಖದ ಮೇಲಿದ್ದ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರೋ ಮಾಸ್ಕ್ ಕಳಚುತ್ತಿದ್ದಂತೆಯೇ ಸೆಕ್ಯುರಿಟಿ ಅಲ್ಲಿಂದ ಪರಾರಿಯಾಗಿದ್ದಾನೆ.
Advertisement
ಸದ್ಯ ಪೊಲೀಸರು ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ದರೋಡಕೋರನಿಗಾಗಿ ಬಲೆಬೀಸಿದ್ದಾರೆ.
Advertisement
#WATCH:Hit multiple times on the head by a robber, security guard of Bank of Maharashtra ATM in #Goa's Panaji foils attempt. Case registered pic.twitter.com/Ca75oFPGED
— ANI (@ANI) October 28, 2017