ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ರಸ್ತೆಗಳೆಲ್ಲ ಕೆರೆಯಾಂಗಳ ಆಗೋದು ಸಹಜ. ಆದರೆ ಬೆಂಗಳೂರಿನ ನಾಗವಾರ ಜಂಕ್ಷನ್‍ನ ರಿಂಗ್ ರೋಡ್ ನ ಸರ್ವಿಸ್ ರಸ್ತೆ ಕಳೆದ ಹಲವಾರು ತಿಂಗಳಿಂದ ಕೆರೆಯಾಂತಾಗಿದೆ.
ನಾಗವಾರ ಜಂಕ್ಷನ್‍ನ ರಿಂಗ್ ರೋಡ್ ನ ಸರ್ವಿಸ್ ರಸ್ತೆ ಕಳೆದ ಹಲವಾರು ತಿಂಗಳಿನಿಂದ ನೀರು ತುಂಬಿಕೊಂಡು ಸಂಚಾರವೇ ಬಂದ್ ಆಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರೋದೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮಳೆ ಬಂದರೆ ಅಗಂಡಿ ಮುಂಗಟ್ಟುಗಳಿಗೆ ನೀರು ನುಗ್ಗುತ್ತೆ. ಜೊತೆಗೆ ರಸ್ತೆಯಲ್ಲಿ 4.5 ಅಡಿ ಅಷ್ಟು ನೀರು ನಿಂತು ವಾಹನ ಸವಾರರಿಗೆ ನರಕದ ದರ್ಶನವಾಗುತ್ತೆ.
Advertisement
Advertisement
ಸ್ಥಳೀಯ ಬಿಬಿಎಂಪಿ ಸದಸ್ಯರಾದ ಮಮತಾ ವೆಂಕಟೇಶ್ ಹಾಗೂ ಸಚಿವ ಕೃಷ್ಣೇಬೈರೇಗೌಡ ಅವರಿಗೆ ಮನವಿ ಮಾಡಿಕೊಂಡು ಜನರಿಗೆ ಸಾಕಾಗಿದೆ. ಓಟ್ ಕೋಳೊಕ್ ಬಂದೊರು ಇಲ್ಲಿವೆರೆಗೂ ಈ ಕಡೆ ತಲೆನೇ ಹಾಕಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
Advertisement
ಈ ಪರಿಸ್ಥಿತಿ ನೋಡಿ ಬಿಬಿಎಂಪಿ ಸದಸ್ಯರಾದ ಮಮತಾ ಅವರಿಗೆ ಕರೆ ಮಾಡಿದರೆ ಯಾವುದು ಆ ಜಾಗ ನನ್ನ ಗಮನಕ್ಕೆ ಬಂದಿಲ್ಲ ಇರೀ ಚಕ್ ಮಾಡ್ತೀನಿ ಅಂತಾ ಕಾಲ್ ಕಟ್ ಮಾಡ್ತಾರೆ. ಮತ್ತೆ ಕರೆ ಮಾಡಿದರೆ ನಮ್ಮ ಇಂಜಿನಿಯರ್ ನ ಕೇಳಿ ನಂಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ.
Advertisement
ಇಂಜಿನಿಯರ್ ಗೆ ಕೇಳಿದರೆ ಅಲ್ಲಿ ವೈಟ್ ಟ್ಯಾಂಪಿಂಗ್ ಮಾಡ್ತಿದ್ದೇವೆ ಎಂದು ಹೇಳುತ್ತಾರೆ. ಅರೇ ಸರ್ವಸ್ ರೋಡ್ ನಲ್ಲಿ ಯಾವ್ ವೈಟ್ ಟ್ಯಾಂಪಿಂಗ್ ಎಂದು ಕೇಳಿದ್ದರೆ, ಅದು ನಮ್ಮ ಸುಪ್ರರ್ದ್ದಿಗೆ ಬರಲ್ಲ. ಅದರೂ ನೋಡ್ತಿವಿ ಅಂತಾ ಸಬೂಬು ಹೇಳುತ್ತಾರೆ.
ಇಲ್ಲಿ ವಾಸ ಮಾಡೋ ಜನರ ನೋವನ್ನು ಯಾರು ಕೇಳೋರೆ ಇಲ್ಲದಾಂತ ಪರಿಸ್ಥಿತಿ ಉಂಟಾಗಿದೆ. ಇನ್ನೂ ನೀರು ನಿಂತಿರೋದ್ರಿಂದ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದೆ. ಜೊತೆಗೆ ಅಂಗಡಿಗಳಿಗೆ ಜನರೇ ಹೋಗದೇ ಬಿಸಿನೆಸ್ ಕೂಡ ಲಾಸ್ ಆಗುತ್ತಿದೆ. ಮಾನ್ಯತಾ ಟೆಕ್ ಪಾರ್ಕ್‍ನ ಕೂಗಳತೆ ದೂರದಲ್ಲಿರೋ ರಸ್ತೆಯ ಸ್ಥಿತಿ ಇದಾಗಿದ್ದು, ಇಲ್ಲಿ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ಜನ ಸಂಚಾರಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ರಾಜಕೀಯ ನಾಯಕರೂ ಸಹ ಇದೇ ರಸ್ತೆಯಲ್ಲಿ ಓಡಾಡುತ್ತಾರೆ.
ಮೇಯರ್ ಅವರ ಪಕ್ಕದ ವಾರ್ಡ್‍ನಲ್ಲೇ ಕಳೆದ ಹಲವಾರು ತಿಂಗಳಿನಿಂದ ಈ ರಸ್ತೆಯ ಪರಿಸ್ಥಿತಿ ಇದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ನಾಯಕರು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಬಿಬಿಎಂಪಿ ಸದಸ್ಯರಾದ ಗೋವಿಂದರಾಜ್ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv