– ರಜೆ ಕೇಳಿದ್ರೆ ಯಾರ ಜೊತೆ ಮಲಗೋಕೆ ಅಂತಾರೆ – ವಿದ್ಯಾರ್ಥಿನಿಯರ ಗೋಳಾಟ
ಚಿಕ್ಕಬಳ್ಳಾಪುರ: ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನೊರ್ವ (HeadMaster) ವಿದ್ಯಾರ್ಥಿನಿಯರ ಜೊತೆ ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಮಾತನಾಡಿದ್ದಾನೆ ಇದರಿಂದ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದಲ್ಲಿ ನಡೆದಿದೆ.
ಮುಖ್ಯಶಿಕ್ಷಕ ಅಸಭ್ಯ ಪದ ಬಳಕೆ ಮಾಡಿ ವಿದ್ಯಾರ್ಥಿನಿಯರನ್ನ (Girls Students) ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ʻಇಂತಹ ಶಿಕ್ಷಕ ನಮಗೆ ಬೇಡವೇ ಬೇಡʼ ಅಂತ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ. ಶಾಲೆ ಮುಂದಿನ ಹೆದ್ದಾರಿಯಲ್ಲಿ ವಾಹನಗಳನ್ನ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ವೋಟ್ ಚೋರಿ ಆರೋಪ; ರಾಹುಲ್ ಗಾಂಧಿ ವಿರುದ್ಧ ನಿವೃತ್ತ ಅಧಿಕಾರಿಗಳ ಚಾಟಿ
ದೊಡ್ಡ ಗಂಜೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಓಬಯ್ಯ ವಿರುದ್ಧ ವಿದ್ಯಾರ್ಥಿನಿಯರು-ಅವರ ಪೋಷಕರು ಸಹ ಸೇರಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಬಿಇಒ ಉಮಾದೇವಿ ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿ ವಿದ್ಯಾರ್ಥಿಗಳು ಗೋಳಾಡಿದ್ದಾರೆ. ಮನೆಗೆ ಹೋಗಲು ರಜೆ ಕೇಳಿದ್ರೆ ಯಾರ ಜೊತೆ ಮಲಗೋಕೆ ಅಂತಾರೆ. ಹೂ ಮುಡಿಕೊಂಡು ಬಂದ್ರೆ ಯಾವ ನನ್ನ ಮಗ ಕೊಟ್ಟ ಅಂತಾರೆ. ಶೌಚಾಲಯಕ್ಕೆ ಹೋದ್ರೆ ಕೆಳಗಡೆ ಯಾವಾಗ್ಲೂ ಸೋರುತ್ತಾ ಅಂತಾರೆ ಅಂತ ಮುಖ್ಯ ಶಿಕ್ಷಕ ಓಬಯ್ಯ ವಿರುದ್ಧ ಗಂಭೀರ ಆರೋಪಗಳನ್ನ ವಿದ್ಯಾರ್ಥಿನಿಯರು ಮಾಡಿದ್ದಾರೆ. ಇದನ್ನೂ ಓದಿ: ಕೆಲವರಿಗೆ ಅಧಿಕಾರ ಮಾತ್ರ ಬೇಕು, ಅದಕ್ಕೆ ನಾವು ಏನು ಮಾಡೋದು: ಡಿಕೆಶಿ ಮಾರ್ಮಿಕ ಮಾತು
ಈ ಸಂಬಂಧ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಮುಖ್ಯ ಶಿಕ್ಷಕನನ್ನ ಈಗಾಗಲೇ ಕಡ್ಡಾಯ ರಜೆ ಮೇಲೆ ತೆರಳಲು ಸೂಚನೆ ನೀಡಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದಿಂದ 11 ಮಂದಿ ಸಾವಿಗೆ ಆರ್‌ಸಿಬಿಯೇ ನೇರ ಹೊಣೆ: ಚಾರ್ಜ್‌ಶೀಟ್ ಸಲ್ಲಿಕೆಗೆ ಸಿಐಡಿ ತಯಾರಿ



