ಬೆಂಗಳೂರು: ಹಿಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರು ಟೋಲ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಈಗ ತಮ್ಮ ಮಗ, ಸಚಿವ ಎಚ್.ಡಿ.ರೇವಣ್ಣರ ಇಲಾಖೆಯಲ್ಲಿ ಕಾಮಾಗಾರಿ ಮುಗಿಯದೇ ಇದ್ದರೂ, ಅಧಿಕಾರಿಗಳು ಟೋಲ್ ಸಂಗ್ರಹಣೆಗೆ ಮುಂದಾಗಿದ್ದಾರೆ.
ಇದು ಬೆಂಗಳೂರಿನ ಯಲಹಂಕ-ಎಪಿ ಬಾರ್ಡರ್ ಟೋಲ್‍ವೇಸ್‍ನ, ಕಡನತಮಲೆ ಟೋಲ್ ಪ್ಲಾಜಾ ನಡೆಯುತ್ತಿರುವ ಹಗಲು ದರೋಡೆ. ಯಲಹಂಕ-ಎಪಿ ಬಾರ್ಡರ್ ಟೋಲ್‍ವೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ರಸ್ತೆಯನ್ನು ನಿರ್ಮಿಸಿದೆ. ಇಲ್ಲಿ ನೋಡಿದರೆ ಕಾಮಗಾರಿ ನಡೆಯುತ್ತಲಿದೆ. ಕಡನತಮಲೆ ಟೋಲ್ ಪ್ಲಾಜಾದಿಂದ ಯಲಹಂಕ ಕಡೆ ಬಂದರೆ ಸಿಂಗಲ್ ರೋಡ್‍ನಲ್ಲೇ ಹೋಗಬೇಕು. ರಸ್ತೆ ಕಾಮಗಾರಿ ಕಂಪ್ಲೀಟ್ ಮಾಡದೇ ಟೋಲ್ ವಸೂಲಿ ಮಾಡುತ್ತಿರೋದಕ್ಕೆ ಜನ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ.
Advertisement
Advertisement
ರಸ್ತೆ ಸಂಪೂರ್ಣ ನಿರ್ಮಾಣವಾಗಿಲ್ಲ ಆಗಲೇ ಟೋಲ್ ವಸೂಲಿ ನಡೆಯುತ್ತಿದೆ. 76 ಕಿಮೀ ಪೈಕಿ 55 ಕಿಮೀ ರಸ್ತೆ ಕಾಮಗಾರಿ ಮುಕ್ತಾಯವಾಗಿದೆ ಅಂತ ಹೇಳ್ತಾರೆ. ಶೇ.70 ಕಾಮಗಾರಿ ಮುಗಿದಿದೆ ಅದಕ್ಕೆ ವಸೂಲಿ ಮಾಡಿದ್ದೀವಿ ಅಂತಾರೆ ಅದಕ್ಕೆ ದಾಖಲೆ ಕೇಳಿದ್ರೆ ಇಲ್ಲಿಯ ತನಕ ಕೊಟ್ಟಿಲ್ಲ. ಅಲ್ಲದೇ ಟೋಲ್ ರಸ್ತೆಯಲ್ಲಿ ಸರ್ವೀಸ್ ರಸ್ತೆ ಇರಬೇಕು ಅದೂ ಇಲ್ಲ ಅಂತ ಸ್ಥಳೀಯ ಮುಖಂಡರಾದ ಪದ್ಮ ಜೈನ್ ಆಕ್ರೋಶ ಹೊರಹಾಕ್ತಾರೆ.
Advertisement
ಟ್ಯಾಕ್ಸಿ, ಓಲಾ, ಊಬರ್ ಸಂಘದವರು ಕೂಡ ಟೋಲ್ ವಸೂಲಿಗೆ ಆಕ್ರೋಶ ಹೊರಹಾಕಿದ್ದಾರೆ. ಈ ಸರ್ಕಾರ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡ್ತಿದೆ ಅಂತ ನಮ್ಮ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ಸೋಮಶೇಖರ್ ಆರೋಪಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv