ನವದೆಹಲಿ: ಇನ್ನು ಮುಂದೆ ಟೋಲ್ ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಶುಲ್ಕ ಪಾವತಿಸಬೇಕಿಲ್ಲ. ನೇರವಾಗಿ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಸರ್ಕಾರ ಟೋಲ್ ಗಳಲ್ಲಿ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆಯನ್ನು ತರಲು ಮುಂದಾಗಿದೆ. ಹೊಸ ವ್ಯವಸ್ಥೆಯಲ್ಲಿ ಚಾಲಕರು ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಇಲ್ಲ ಎಂದು ಕೇಂದ್ರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Advertisement
ಬ್ಯಾಂಕಿನ ಖಾತೆಯಿಂದ ನೇರವಾಗಿ ಹಣ ಜಮೆಯಾಗುವ ವ್ಯವಸ್ಥೆ ದಕ್ಷಿಣ ಕೊರಿಯಾದಲ್ಲಿದೆ. ಮೇ ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಭಾರತಕ್ಕೆ ಭೇಟಿಕೊಡಲಿದ್ದಾರೆ. ಅವರ ಭೇಟಿ ವೇಳೆ ಹೊಸ ವ್ಯವಸ್ಥೆ ತಿಳುವಳಿಕಾ ಪತ್ರಕ್ಕೆ(ಎಂಒಯು) ಸಹಿ ಹಾಕಲಿದ್ದೇವೆ. ಹೊಸ ವ್ಯವಸ್ಥೆಯಿಂದಾಗಿ ಟೋಲ್ ಗಳಲ್ಲಿ ವಾಹನ ಸಂಚಾರ ಸುಗುಮವಾಗಲಿದೆ ಎಂದು ಗುರು ಗ್ರಾಮದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದರು.
Advertisement
ಮೆಟ್ರೊ ಸಿಟಿಗಳಲ್ಲಿರುವ ಟೋಲ್ ಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ. ಹಾಗಾಗಿ ಆರಂಭದಲ್ಲಿ ಮೆಟ್ರೋ ನಗರದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ನಿರ್ಧಾರ ಮಾಡಿದ್ದೇವೆ ಇದರಿಂದ ಟೋಲ್ ಗಳಲ್ಲಿ ಸಂಚಾರ ಸುಗುಮವಾಗಲಿದೆ ಎಂದು ತಿಳಿಸಿದರು.