ಚಿಕ್ಕಮಗಳೂರು: ಶೋಕಿ ಸೈಲನ್ಸರ್ ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ಪೊಲೀಸರು ರೋಡ್ ರೋಲರ್ ಹತ್ತಿಸಿರುವ ಘಟನೆ ನಗರದ ಸಂಚಾರಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಚಿಕ್ಕಮಗಳೂರು ನಗರದಲ್ಲಿ ಕೆಲ ಯುವಕರು ಬೈಕಿನ ಸೈಲನ್ಸರ್‌ಗಳನ್ನು ಮೋಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ದದೊಂದಿಗೆ ಓಡಾಡುತ್ತಿದ್ದರು. ಇದರಿಂದ ಸ್ಥಳೀಯರಿಗೂ ಕೂಡ ತೊಂದರೆಯಾಗುತ್ತಿತ್ತು. ಶಾಲಾ-ಕಾಲೇಜುಗಳ ಆವರಣದಲ್ಲಿ ಜೋರಾಗಿ ಎಕ್ಸ್‌ಲೇಟರ್ ರೈಸ್ ಮಡುತ್ತಾ, ವಿಚಿತ್ರ ಶಬ್ದದೊಂದಿಗೆ ಓಡಾಡುತ್ತಿದ್ದರು. ಜೊತೆಗೆ ಯುವಕರು ಬೈಕ್‍ಗಳಲ್ಲಿ ನಗರದೊಳಗೆ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವ್ಹೀಲಿಂಗ್ ಮಾಡುತ್ತಿದ್ದರು.
Advertisement
Advertisement
ನಡು ರಸ್ತೆ ರೇಸಿಗೆ ಬಿದ್ದ ಯುವಕರು ವ್ಹೀಲಿಂಗ್ ಮಾಡಿಕೊಂಡು ಇತರ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿದ್ದರು. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವೀಡಿಯೋವನ್ನು ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. ಎಸ್ಪಿ ಸೂಚನೆ ಮೇರೆಗೆ ನಿನ್ನೆ 5 ಬೈಕ್‍ಗಳನ್ನು ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ
Advertisement
Advertisement
ಆ ಬೈಕ್‍ಗಳಿಗೆ ಇನ್ಶೂರೆನ್ಸ್ ದಾಖಲೆಗಳು ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು ದಾಖಲೆಗಳಿಲ್ಲ. ಮತ್ತೊಂದು ಸೈಲನ್ಸರ್‌ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್‍ಗಳು ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ. ಹಾಫ್ ಹೆಲ್ಮೆಟ್ ಹಾಕುವವರಿಗೆ ಹೆಲ್ಮೆಟಿನ ಮಹತ್ವ ತಿಳಿಸಿ ಫುಲ್ ಹೆಲ್ಮೆಟ್ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು