ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭ್ಯರ್ಥಿಗಳು ತಮ್ಮ ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಈಗ ಜಿಲ್ಲೆಯಲ್ಲಿ ಮತದಾರರ ಮನ ಸೆಳೆಯಲು ರಾತ್ರೋರಾತ್ರಿ ರಸ್ತೆ ನಿರ್ಮಾಣ ಮಾಡಲಾಗಿದೆ.
ಚಿಕ್ಕಮಗಳೂರಿನ ಎನ್‍ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಒಂದೇ ದಿನಕ್ಕೆ 5 ಕಿಲೋಮೀಟರ್ ಕಳಪೆ ರಸ್ತೆ ನಿರ್ಮಾಣ ಮಾಡಲಾಗಿದೆ. ತಳದಲ್ಲಿ ಜಲ್ಲಿ ಹಾಕಿಲ್ಲ, ಮಣ್ಣಿನ ಮೇಲೆ ಡಾಂಬರ್ ರಸ್ತೆ ಮಾಡಿದ್ದಾರೆ. ಪರಿಣಾಮ ಪರೀಕ್ಷೆ ಮಾಡಿದರೆ ರೊಟ್ಟಿಯಂತೆ ಡಾಂಬರು ಎದ್ದು ಬರುತ್ತಿದೆ.
Advertisement
Advertisement
ಗ್ರಾಮಸ್ಥರು ಬರಿಗೈಲ್ಲಿ ರಸ್ತೆಯ ಡಾಂಬರನ್ನು ಕಿತ್ತು ಬಿಸಾಡುತ್ತಿದ್ದಾರೆ. ಸುಮಾರು 1.75 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಕಾಂಟ್ರಾಕ್ಟರ್ ರೆಡ್ಡಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕಟ್ಟಿನಮನೆ-ಗಡಿಗೇಶ್ವರ ರಸ್ತೆಯಲ್ಲಿ ಬರಿಗೈಯಲ್ಲಿ ಡಾಂಬರ್ ಕಿತ್ತು ಪ್ರತಿಭಟನೆ ಮಾಡುತ್ತಿದ್ದಾರೆ.