ವಿಜಯಪುರ: ರಸ್ತೆಗಳಿಗೆ ಇಟ್ಟಿರುವ ಹೊಸ ಹೆಸರುಗಳಲ್ಲಿ ನನ್ನ ಹೆಸರು, ನನ್ನ ತಂದೆ ಹೆಸರು ಇದೆಯಾ? ಇವರೇನು ದೇಶದ್ರೋಹಿಗಳಾ? ರಸ್ತೆಗೆ ನಾಮಕರಣ ವಿಚಾರದಲ್ಲಿ ಆರೋಪ ಮಾಡುತ್ತಿರುವವರು ಕಳ್ ನನ್ಮಕ್ಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.
ನಗರದಲ್ಲಿನ ಎಲ್ಲಾ ರಸ್ತೆಗಳಿಗೂ ಸ್ವಾತಂತ್ರ‍್ಯ ಹೋರಾಟಗಾರರ, ಪೂಜ್ಯರ ಹೆಸರಿಟ್ಟದ್ದೇನೆ ಎಂದ ಯತ್ನಾಳ್, ನಗರದಲ್ಲಿ ಹಲವಾರು ರಸ್ತೆಗಳಿಗೆ ಹೆಸರಿರಲಿಲ್ಲ. ಮನಗೂಳಿ ರಸ್ತೆ, ಬೊಂಬಾಲ ಅಗಸಿ, ಮುಳ್ಳಗಸಿ, ಇಂಡಿ ರೋಡ್, ಅಥಣಿ ರೋಡ್, ದರ್ಗಾ ರಸ್ತೆಗಳಿಗೆ ಹೆಸರಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಂತೋಷ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹ
Advertisement
Advertisement
ಎಸ್‌ಎಸ್ ಫ್ರಂಟ್ ರೋಡ್ ಇದ್ದದ್ದನ್ನು ಬದಲಾಯಿಸಿ, ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಎಂದು ಮರುನಾಮಕರಣ ಮಾಡಿದ್ದೇವೆ. ಅಂಬೇಡ್ಕರ್ ವೃತ್ತದ ಬಳಿಯ ರಸ್ತೆಗೆ ಕನಕದಾಸ ಮಾರ್ಗ ಎಂದು ಹೆಸರಿಡಲಾಗಿದೆ. ಸ್ಟೇಷನ್ ರಸ್ತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಮರುನಾಮಕರಣ ಮಾಡಲಾಗಿದೆ ಎಂದರು.
Advertisement
ಗೋದಾವರಿ ಹೊಟೇಲ್ ಬಳಿಯ ರಸ್ತೆಗೆ ಡಾ. ಬಾಬು ಜಗಜೀವನ್ ರಾಮ್, ತೊರವಿ ರಸ್ತೆಗೆ ಸುಭಾಶ್ ಚಂದ್ರ ಬೋಸ್, ಬಬಲೇಶ್ವರ ನಾಕಾ ರಸ್ತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಹೆಸರು ಇಟ್ಟಿದ್ದಾನೆ. ಬಸ್ ನಿಲ್ದಾಣದ ಪಕ್ಕದ ರಸ್ತೆಗೆ ಡಾ. ಎಪಿಜೆ ಅಬ್ದುಲ್ ಕಲಾಂ, ಆಕಾಶವಾಣಿ ಬಳಿಯ ರಸ್ತೆಗೆ ಸ್ವಾತಂತ್ರ‍್ಯ ಹೋರಾಟಗಾರ ವೀರ ಸಾವರ್ಕರ್ ಹೆಸರನ್ನಿಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಪಿ ಹೋಟೆಲ್‍ನಲ್ಲಿ ಪಂಚನಾಮೆ
Advertisement
ಬಾಗಲಕೋಟೆ ರಸ್ತೆಗೆ ಸರ್‌ಎಂ ವಿಶ್ವೇಶ್ವರಯ್ಯ, ಮನಗೂಳಿ ರಸ್ತೆಗೆ ಮಹಾರಾಣಾ ಪ್ರತಾಪ್, ದರ್ಗಾ ಬಳಿಯ ಮತ್ತೊಂದು ರಸ್ತೆಗೆ ಚಂದ್ರಶೇಖರ್ ಆಜಾದ್ ಮಾರ್ಗ, ಎಸ್ಪಿ ಕಚೇರಿ ಎದುರಿನ ಸೊಲ್ಲಾಪುರ ರಸ್ತೆಗೆ ಸಂಗೊಳ್ಳಿ ರಾಯಣ್ಣ ಮಾರ್ಗ ಎಂದು ಹೆಸರಿಡಲಾಗಿದೆ ಎಂದರು.