ಬೆಂಗಳೂರು: ಪ್ರಧಾನಿ ಮೋದಿಗಾಗಿ ರೆಡಿ ಮಾಡಿದ್ದ ರಸ್ತೆ ಕಿತ್ತೋಗಿ ಪ್ರಧಾನಿ ವರದಿ ಕೇಳಿದಾಗ ಬಿಬಿಎಂಪಿ ಕಳಪೆ ರಸ್ತೆಯ ಬಗ್ಗೆ ಒಪ್ಪಿಕೊಳ್ಳದೇ ಪೈಪ್ ಲೈನ್ ಸೋರಿಕೆ ಅಂತಾ ಜಲಮಂಡಳಿ ಮೇಲೆ ಗೂಬೆ ಕೂರಿಸಿ ವರದಿ ಕೊಟ್ಟಿದ್ದಾಯ್ತ. ಆದರೆ ವರದಿ ಕೊಟ್ಟ ಮೇಲೆ ಸೈಲೆಂಟ್ ಆಗಿ ಈಗ ರೋಡ್ ಕ್ವಾಲಿಟಿ ಚೆಕ್ಕಿಂಗ್‍ಗೆ ಬಿಬಿಎಂಪಿ ಇಳಿದಿದ್ದು, ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ರೆಡ್ ಹ್ಯಾಂಡ್ ಆಗಿ ಸೆರೆಯಾಗಿದೆ.
Advertisement
ಬಿಬಿಎಂಪಿಯು ರಸ್ತೆ ರಿಪೋರ್ಟ್ ವಿಚಾರದಲ್ಲಿ ಎಷ್ಟೆಲ್ಲ ಕಳ್ಳಾಟವಾಡಿತ್ತು ಅನ್ನೋದು ಬಹಿರಂಗವಾಗಿ ಗೊತ್ತಾಗಿದೆ. ಪ್ರಧಾನಿ ಕಚೇರಿಗೆ ಸುಳ್ಳು ರಿಪೋರ್ಟ್ ಅಂತಾ ಪಬ್ಲಿಕ್ ಟಿವಿಯಲ್ಲೂ ಸುದ್ದಿ ಪ್ರಸಾರವಾಗಿತ್ತು. ಈಗ ಸೈಲೆಂಟ್ ಆಗಿ ಜ್ಞಾನಭಾರತಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಬಳಿ ರಸ್ತೆ ಕುಸಿತವಾದ ಭಾಗದಲ್ಲಿ ರಸ್ತೆಯ ಗುಣಮಟ್ಟದ ಸ್ಯಾಂಪಲ್‍ನ್ನು ಲ್ಯಾಬ್‍ಗೆ ರವಾನಿಸಿದೆ. ಜಲಮಂಡಳಿ ಪೈಪ್ ಲೈನ್ ನೀರು ಸೋರಿಕೆ ಅಂತಾ ಪುಂಖಾನುಪುಂಖವಾಗಿ ಕಥೆ ಹೊಡೆದ ಬಿಬಿಎಂಪಿ ಕಮೀಷನರ್ ಈಗ ಟಿವಿಸಿಸಿ ಸದಸ್ಯರ ಮೂಲಕ ಜ್ಞಾನಭಾರತಿ ಹಾಗೂ ವಿವಿ ಅವರಣದ ಒಟ್ಟು ಐದೂವರೆ ಕಿಲೋ ಮೀಟರ್ ರಸ್ತೆಯ ಸ್ಯಾಂಪಲ್ ಸಂಗ್ರಹಿಸಿ, ಲ್ಯಾಬ್‍ಗೆ ಕಳಿಸಿದೆ. ಇನ್ನು ನಾಲ್ಕೈದು ದಿನದಲ್ಲಿ ವರದಿಯೂ ಬರಲಿದೆ. ಇದನ್ನೂ ಓದಿ: ಇದು ಮೋದಿ ಓಡಾಡಿದ ರಸ್ತೆಯೇ ಅಲ್ಲ – BBMP ಹೈಡ್ರಾಮಾ
Advertisement
Advertisement
ಬೆಟಮಿನ್ ಹಾಗೂ ಥಿಕ್‍ನೆಸ್ ಬಗ್ಗೆ ಟೆಸ್ಟ್ ಮಾಡ್ತಾ ಇದ್ದೀವಿ. ಮುಖ್ಯ ಎಂಜಿನಿಯರ್ ಸೂಚನೆಯ ಮೇರೆಗೆ ಜ್ಞಾನಭಾರತಿ ರಸ್ತೆಯ ರೋಡ್‍ನ ಸ್ಯಾಂಪಲ್ ಚೆಕ್ ಮಾಡ್ತಾ ಇದ್ದೀವಿ ಅಂತಾ ಸ್ವತಃ ಸಿಬ್ಬಂದಿ ಬಾಯ್ಬಿಟ್ಟಿದ್ದಾರೆ. ಪ್ರಧಾನಿಗೆ ರಿಪೋರ್ಟ್ ಕೊಟ್ಟ ಮೇಲ್ಯಾಕೆ ಈ ಕ್ವಾಲಿಟಿ ಚೆಕ್ಕಿಂಗ್ ಮುಂಚೆಯೇ ಮಾಡಬೇಕಾಗಿತ್ತಲ್ಲ ಎನ್ನುವ ಪ್ರಶ್ನೆಗೆ ಅದೆಲ್ಲ ನಮ್ಗೆ ಗೊತ್ತಿಲ್ಲ ಅಂತಾ ಎಸ್ಕೇಪ್ ಆದರು.