ಚಿಕ್ಕೋಡಿ: ಲಕ್ಷ್ಮಣ್ ಸವದಿ (Laxman Savadi) ಕ್ಷೇತ್ರ ಅಥಣಿಯಲ್ಲಿ ಕೈ (Congress) ಕಮಲ (BJP) ಮಧ್ಯೆ ಕ್ರೆಡಿಟ್ ಕಿತ್ತಾಟ ಶುರುವಾಗಿದೆ. ಯಕ್ಕಂಚಿ – ಮುಸಲ್ಯಾನಖೋಡಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ವಿಚಾರವಾಗಿ ಈಗಾಗಲೇ ಅಂದಿನ ಶಾಸಕ ಮಹೇಶ್ ಕುಮಟಳ್ಳಿ (Mahesh Kumatalli) ಚಾಲನೆ ನೀಡಿದ್ದ ಕಾಮಗಾರಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ವಿಚಾರಕ್ಕೆ ಮಹೇಶ್ ಕುಮಟಳ್ಳಿ ಗರಂ ಆಗಿದ್ದಾರೆ. ಈ ಬಗ್ಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಹೇಶ್ ಕುಮಟಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಚಾಲನೆ ನೀಡಿದ್ದು ಗಮನಿಸಿದ್ದೇನೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ – 12 ಸಾವು, ಇಬ್ಬರು ಗಂಭೀರ
Advertisement
Advertisement
ನಾನು ಶಾಸಕನಾಗಿದ್ದಾಗ ಕರ್ನಾಟಕ ನೀರಾವರಿ ನಿಗಮದಿಂದ 16.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ 13 ಕಾಮಗಾರಿ ಮಂಜೂರಾತಿ ಪಡೆದಿದ್ದೆ. ಅದರಲ್ಲಿ ಈ ರಸ್ತೆಯೂ ಒಂದು. ಕಳೆದ ಫೆ.2ರಂದು ನಾನು ಈ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೆ. 8 ತಿಂಗಳು ಆ ಕಾಮಗಾರಿ ತಡೆಹಿಡಿದಿದು, ಈಗ ಚಾಲನೆ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
Advertisement
Advertisement
ಗ್ರಾಮೀಣಾಭಿವೃದ್ಧಿ ಯೋಜನೆಯ 8.99 ಕೋಟಿ ರೂ. ಹಾಗೂ ಲೋಕೋಪಯೋಗಿ ಇಲಾಖೆಯ 7 ಕೋಟಿ ರೂ. ಕಾಮಗಾರಿ ಟೆಂಡರ್ ಆಗಿದೆ. ಇದನ್ನು ಬದಲಾಯಿಸಿ ಸ್ಥಳೀಯ ಶಾಸಕರು ಲೆಟರ್ ನೀಡಿದ ಮಾಹಿತಿ ಬಂದಿದೆ. ಈ ಬಗ್ಗೆ ಪಕ್ಷದ ವತಿಯಿಂದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಮೈನೆಯಲ್ಲಿ ಗುಂಡಿನ ದಾಳಿ – 22 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
Web Stories