ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಎದ್ದೇಳಲಾರದ ಸ್ಥಿತಿಯಲ್ಲಿದ್ದರೆ, ಬಿಬಿಎಂಪಿ ನಾವೇ ಆಸ್ಪತ್ರೆಯ ಬಿಲ್ ಕಟ್ಟುತ್ತೇವೆ ಎಂದು ಹೇಳುತ್ತಿದೆ. ಈ ಮೂಲಕ ಹೈಕೋರ್ಟ್ ಛಾಟಿ ಬೀಸಿದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲಾ ಗುಂಡಿಗಳನ್ನ ಮುಚ್ಚಿಲ್ಲ ಅನ್ನೋದು ಸಾಬೀತಾಗಿದೆ.
ರವೀಂದ್ರರಾಜು ಗಾಯಗೊಂಡವರಾಗಿದ್ದು, ಇವರು ಎಚ್‍ಎಂಟಿ ಲೇಔಟ್ ನಿವಾಸಿಯಾಗಿದ್ದಾರೆ. ಕಚೇರಿಗೆ ಹೋಗುವ ಸಂದರ್ಭದಲ್ಲಿ ಎಚ್‍ಎಂ ಟಿ ಗ್ರೌಂಡ್ ಬಳಿ ದೊಡ್ಡದಾದ ಗುಂಡಿಯಿದ್ದು, ಕಾಣದೆ ಬಿದ್ದಿದ್ದಾರೆ. ಪರಿಣಾಮ ಬೆನ್ನುಮೂಳೆ ಮುರಿದಿದೆ. ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ರವೀಂದ್ರರಾಜು ಬೆನ್ನುಹುರಿಗೆ ಸರಿಯಾಗಿಯೇ ಏಟು ಬಿದ್ದಿದ್ದು, ಹೀಗಾಗಿ ಇನ್ನೆಂದೂ ವಾಹನ ಓಡಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ. ಇದರ ಮಧ್ಯೆ ಬಿಬಿಎಂಪಿ ಆಸ್ಪತ್ರೆಯ ಬಿಲ್ ಮೊತ್ತವನ್ನು ನಾವು ಪಾವತಿ ಮಾಡುತ್ತೇವೆ. ರಸ್ತೆಯಲ್ಲಿ ಗುಂಡಿಗಳು ಕಂಡುಬಂದರೆ ಮುಚ್ಚಿಸುವ ಕೆಲಸವನ್ನು ನಾವು ಮಾಡುತ್ತಾ ಇದ್ದೀವಿ. ಜನರು ಕೂಡ ಮಾಹಿತಿ ಕೊಡಬಹುದು ಎಂದು ಬಿಬಿಎಂಕೆ ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.
Advertisement