ಮೈಸೂರು: ರಾಜ್ಯದಲ್ಲಿ ಈಗ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳದ್ದೇ ಚರ್ಚೆ. ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೂ ಗುಂಡಿಗಳು ವೇದಿಕೆಯಾಗಿವೆ.
ರಸ್ತೆಯಲ್ಲಿನ ಗುಂಡಿಗಳು ಸರಕಾರಕ್ಕೆ ಕೆಟ್ಟ ಹೆಸರು ತರುತ್ತೀವೆ. ಆದ್ರೆ ಇದೀಗ ಇಂತಹ ಗುಂಡಿಗಳನ್ನು ಪಟಾ ಪಟ್ ಮುಚ್ಚುವ ಯಂತ್ರವೊಂದು ರೋಡಿಗಿಳಿದಿದೆ. ಸುಲಭವಾಗಿ ಗುಂಡಿ ಮುಚ್ಚುವ ಮಿಷನ್ ಪ್ರಾಯೋಗಿಕ ಇಂದು ಮೈಸೂರಿನಲ್ಲಿ ಮಾಡಲಾಯಿತು.
Advertisement
ಪುಣೆಯಿಂದ ಬಂದ ತಂಡ ಮೈಸೂರಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಇದರ ಕಾರ್ಯ ವೈಖರಿಯನ್ನು ತೋರಿಸಿದರು. ಒಂದು ಸ್ಕ್ವೇರ್ ಮೀ. ನ ಗುಂಡಿ ಮುಚ್ಚಲು 2.5 ಸಾವಿರ ವೆಚ್ಚ. ಅಂದರೇ ಹಳೆಯ ವಿಧಾನಕ್ಕಿಂತ ನೂತನ ವಿಧಾನದ ವೆಚ್ಚ ಹೆಚ್ಚು. ಈಗ ಇರುವುದಕ್ಕಿಂತ 5 ಪಟ್ಟು ಯಂತ್ರದ ವೆಚ್ಚ ಹೆಚ್ಚಾಗುತ್ತದೆ. ಹಳೆಯ ವಿಧಾನದ ಡಾಂಬರಿಕರಣಕ್ಕೆ 500ರೂ ವೆಚ್ಚವಾಗಿದ್ದು, 1 ವರ್ಷ ಗ್ಯಾರೆಂಟಿ ಇತ್ತು. ಈ ನೂತನ ಯಂತ್ರದಲ್ಲಿ ಒಂದು ಗುಂಡಿ ಮುಚ್ಚಲು ತಗಲುವ ವೆಚ್ಚ 2.5 ಸಾವಿರವಾಗಿದ್ದು, 2 ವರ್ಷ ಗ್ಯಾರೆಂಟಿ ಇದೆ. `ರೋಡ್ ಡಾಕ್ಟರ್’ ಎಂಬ ಪುಣೆ ಕಂಪನಿ ಈ ಯಂತ್ರವನ್ನು ರೂಪಿಸಿದೆ. ಸಂಪೂರ್ಣವಾಗಿ ಕಂಪನಿಯ ಜವಾಬ್ದಾರಿಯಲ್ಲೇ ಗುಂಡಿ ಮುಚ್ಚೊ ಕೆಲಸ ನಡೆಯುತ್ತದೆ.
Advertisement
Advertisement
ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಮತ್ತು ಮೇಯರ್ ರವೀಕುಮಾರ್ ಯಂತ್ರದ ಪ್ರಾಯೋಗಿಕ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರದಿಂದ ಈಗಾಗಲೇ ಮೈಸೂರಿನಾದ್ಯಂತ ರಸ್ತೆಗಳ ಗುಂಡಿ ಮುಚ್ಚಲು 10 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈ ಯಂತ್ರ ಬಳಕೆಗೆ ಚರ್ಚೆ ಶುರುವಾಗಿದೆ.
Advertisement
ಗಡುವು ವಿಸ್ತರಣೆ: ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ನಾನು ನೀಡಿದ್ದ ಗಡುವು ಮುಗಿದಿದೆ. ಆದ್ರೆ ಮೇಯರ್ ಹಾಗೂ ಪಾಲಿಕೆ ಆಯುಕ್ತರು ನನ್ನ ಬಳಿ ಇನ್ನಷ್ಟು ಗಡುವು ನೀಡಲು ಮನವಿ ಮಾಡಿದ್ರು. ಮಳೆ ಬಂದ ಕಾರಣ ಕೆಲವು ಕಡೆ ಕಾಮಾಗಾರಿ ನಡೆಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ನವೆಂಬರ್ 6ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.