ದಾವಣಗೆರೆ: ಭಾರೀ ಗಾತ್ರದ ವಾಹನ ಸಂಚಾರದಿಂದ ರಸ್ತೆ ಕುಸಿತವಾಗಿರುವ (Road Collapse) ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ – ದೊಡ್ಡಘಟ್ಟ ರಸ್ತೆಯಲ್ಲಿ ನಡೆದಿದೆ.
Advertisement
ಭಾರೀ ಗಾತ್ರದ ವಾಹನಗಳಿಂದ ರಸ್ತೆ ಸಂಪೂರ್ಣ ಕುಸಿತವಾಗಿದ್ದು, ಇದೀಗ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ರೈತರು ಭತ್ತ ಸಾಗಾಣಿಕೆಗೂ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕಾಮಗಾರಿ ವೇಳೆ ಭೂಕುಸಿತ- ಸುರಂಗದಡಿ ಸಿಲುಕಿದ 36 ಕಾರ್ಮಿಕರು
Advertisement
Advertisement
ಇದೀಗ ಕಳಪೆ ಕಾಮಗಾರಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೆ ರಸ್ತೆ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!