ಲಕ್ನೋ: ರಸ್ತೆ ಬದಿ ಮಲಗಿದ್ದ ನಾಯಿಯ ದೇಹದ ಮೇಲೆಯೇ ರಸ್ತೆ ನಿರ್ಮಾಣ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾ ನಗರದಲ್ಲಿ ನಡೆದಿದೆ.
ಆಗ್ರಾದ ಪತೇಹಾಬಾದ್‍ನ ರಸ್ತೆಗಳಿಗೆ ಮಂಗಳವಾರ ರಾತ್ರಿ ಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆಯೇ ಬಿಸಿ ಟಾರ್ ಅನ್ನು ಹಾಕಿಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರಿಗೆ ನಾಯಿಯ ಪರಿಸ್ಥಿತಿಯನ್ನು ನೋಡಿ ಕಾಮಗಾರಿ ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವೇಳೆ ನಾಯಿ ಅರಚಿದ್ದರೂ ಗಮನಿಸದೆ, ರಸ್ತೆ ನಿರ್ಮಾಣ ಮಾಡಿಕೊಂಡು ಹೋಗಿದ್ದಾರೆ.
Advertisement
Advertisement
ಸಾಮಾಜಿಕ ಕಾರ್ಯಕರ್ತ ಗೋವಿಂದ ಪರಶಾರ್ ಎಂಬುವರು ಮಾತನಾಡಿ, ಕಾಲಿನ ಮೇಲೆ ರಸ್ತೆ ನಿರ್ಮಾಣವಾಗಿದ್ದರಿಂದ ನೋವಿನಿಂದ ನಾಯಿ ಸಾವನ್ನಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾಯಿಯ ದೇಹವನ್ನು ಜೆಸಿಬಿಯಿಂದ ತೆಗೆಸಿ ಅಂತ್ಯಸಂಸ್ಕಾರ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇನೆ. ಅಲ್ಲದೇ ರಸ್ತೆ ನಿರ್ಮಾಣ ಮಾಡಿದ ಕೆಲಸದವರು ಈ ಘಟನೆ ಕುರಿತು ಪಾಠ ಕಲಿಯಬೇಕು. ಇಂತಹ ಘಟನೆಗಳು ಮರುಕಳಿಸಿಬಾರದು ಈ ಬಗ್ಗೆ ಕಾಮಗಾರಿ ಕಂಪನಿಗೆ ದೂರು ನೀಡುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Advertisement
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅನೇಕ ಸಂಘ-ಸಂಸ್ಥೆಗಳು ಸ್ಥಳಕ್ಕಾಗಿಮಿಸಿ ಕಾಮಗಾರಿ ನಡೆಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಓರ್ವ ಕಾರ್ಮಿಕ ರಾತ್ರಿ ಕಾಮಗಾರಿ ನಡೆಯುವ ವೇಳೆ ಕತ್ತಲಿದ್ದರಿಂದ ಯಾವುದೇ ನಾಯಿ ಕಾಣಿಸಿಲ್ಲವೆಂದು ಹೇಳಿಕೆ ನೀಡಿದ್ದಾನೆ.
Advertisement
ಘಟನೆ ಕುರಿತು ಮಾತನಾಡಿದ ಸಾರ್ವಜನಿಕ ಕಾಮಗಾರಿ ಎಂಜಿನೀಯರ್ ನರೇಶ್ ಕುಮಾರ್ ಆರ್ ಪಿ ಅವರು ಇನ್ಫ್ರಾವೆಂಚೂರ್ ಕಂಪನಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
Road construction company RP Infraventure Pvt. Ltd. constructed part of Fatehpur road over a dead dog in Agra. The dog's body was removed after police complaint was filed,PWD has also sent a notice to the company pic.twitter.com/rivppo9ZxD
— ANI UP/Uttarakhand (@ANINewsUP) June 13, 2018