– ರಸ್ತೆ ಎಂಜಿನಿಯರುಗಳ ತಪ್ಪು ಎದ್ದು ಕಾಣುತ್ತಿದೆ ಎಂದ ಕೇಂದ್ರ ಸಚಿವ
ನವದೆಹಲಿ: ಪಾಕಿಸ್ತಾನ, ಚೀನಾ ಯುದ್ಧಗಳು, ನಕ್ಸಲರ ದಾಳಿ, ಕೋಮು ಗಲಭೆಗಳಿಗಿಂತ ರಸ್ತೆ ಅಪಘಾತದಲ್ಲೇ ಹೆಚ್ಚಿನ ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅಭಿಪ್ರಾಯಪಟ್ಟಿದ್ದಾರೆ.
FICCI ರೋಡ್ ಸೇಫ್ಟಿ ಅವಾರ್ಡ್ಸ್ ಮತ್ತು ಕಾನ್ಕ್ಲೇವ್ 2024 ರ ಆರನೇ ಆವೃತ್ತಿಯಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ (Road Accident) ಸುಮಾರು 1.5 ಲಕ್ಷ ಸಾವುಗಳು ವರದಿಯಾಗುತ್ತಿವೆ. ಬಲಿಪಶುಗಳಲ್ಲಿ ಸುಮಾರು 65% ಯುವಕರು ಮತ್ತು ಯುವತಿಯರು ಇದ್ದಾರೆ. ಇದರಿಂದ ಜಿಡಿಪಿಯ ಶೇ.3ರಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದರೆ ಜೀವಾವಧಿ ಶಿಕ್ಷೆ – ಯುಪಿಯಲ್ಲಿ ಹೊಸ ಸಾಮಾಜಿಕ ಜಾಲತಾಣ ನೀತಿ ಜಾರಿ
ನೀವು ಲೆಕ್ಕ ಹಾಕಿದರೆ, ಚೀನಾ ಅಥವಾ ಪಾಕಿಸ್ತಾನ ಯುದ್ಧಗಳು, ನಕ್ಸಲರ ದಾಳಿ, ಕೋಮು ಗಲಭೆಗಳು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ದುರ್ಘಟನೆಗಳಿಗಿಂತ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿ ರಸ್ತೆ ಅಪಘಾತಕ್ಕೂ ಚಾಲಕರನ್ನೇ ಹರಕೆಯ ಕುರಿ ಮಾಡುತ್ತಿದ್ದೇವೆ. ಆದರೆ ರಸ್ತೆ ಎಂಜಿನಿಯರುಗಳ ತಪ್ಪು ಇಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಸಿದ್ಧಪಡಿಸುವ ವಿಸ್ತೃತ ಯೋಜನಾ ವರದಿಗಳಿಂದ (ಡಿಪಿಆರ್) ಹೆದ್ದಾರಿಗಳಲ್ಲಿ ಬ್ಲಾಕ್ ಸ್ಪಾಟ್ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.