ಕುಂಭಮೇಳದಿಂದ ವಾಪಸ್ ಆಗುವಾಗ ರಸ್ತೆ ಅಪಘಾತ – ಮೈಸೂರಿನ ಇಬ್ಬರು ದುರ್ಮರಣ

Public TV
0 Min Read
Road accident while returning from Maha KumbhMela two died

ಪ್ರಯಾಗ್‍ರಾಜ್/ಮೈಸೂರು: ಮಹಾ ಕುಂಭಮೇಳಕ್ಕೆ (Maha Kumbhmela) ಹೋಗಿ ವಾಪಸ್ ಬರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ (Accident) ಮೈಸೂರಿನ (Mysuru) ಇಬ್ಬರು ಯುವಕರು ಮೃತಪಟ್ಟ ಘಟನೆ ಮಿರ್ಜಾಪುರದ ಬಳಿ ನಡೆದಿದೆ.

ಮೃತರನ್ನು ರಾಮಕೃಷ್ಣ ಶರ್ಮ ಹಾಗೂ ಅರುಣ್ ಶಾಸ್ತ್ರಿ ಎಂದು ಗುರುತಿಸಲಾಗಿದೆ. ಪ್ರಯಾಗ್‍ರಾಜ್ ಮುಗಿಸಿಕೊಂಡು ಕಾಶಿಗೆ ಬರುವಾಗ ಮಿರ್ಜಾಪುರದ ಬಳಿ ಬರುವಾಗ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವಿಗೀಡಾಗಿದ್ದಾರೆ.

ರಾಮಕೃಷ್ಣ ಅವರು ಕೆಆರ್‍ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು.

Share This Article