ಕಾರವಾರ: ಸ್ಕೂಟಿಯಲ್ಲಿ ಸಂಚರಿಸುತಿದ್ದ ತಂದೆ-ಮಗಳಿಗೆ ಹಿಂಬದಿಯಿಂದ ಸೀಬರ್ಡ್ ಬಸ್ ಡಿಕ್ಕಿ (Road Accident) ಹೊಡೆದು ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ-66 (National Highway) ರಲ್ಲಿ ನಡೆದಿದೆ.
Advertisement
ಲವಿತಾ ಜಾರ್ಜ ಫರ್ನಾಂಡಿಸ್ (13) ಸಾವನ್ನಪ್ಪಿದ ಬಾಲಕಿ. ಆಕೆಯ ತಂದೆ ಜಾರ್ಜ್ ಫರ್ನಾಂಡಿಸ್ ಗಾಯಗೊಂಡಿದ್ದು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ (KIMS Medical College Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್
Advertisement
Advertisement
ಬೆಂಗಳೂರಿನಿಂದ (Bengaluru) ಕಾರವಾರಕ್ಕೆ ಬರುತಿದ್ದ ಸೀ ಬರ್ಡ್ ಕಂಪನಿಯ ಬಸ್, ಬಿಣಗಾದಿಂದ ಕಾರವಾರಕ್ಕೆ ಹೋಗುತಿದ್ದ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್