ರಸ್ತೆ ಅಪಘಾತ : ಕಿರುತೆರೆ ಖ್ಯಾತ ನಟಿ ವೈಭವಿ ಉಪಾಧ್ಯಾಯ ದುರ್ಮರಣ

Public TV
1 Min Read
Vaibhavi Upadhyay 2

ಭಾವಿ ಪತಿಯೊಂದಿಗೆ ಹಿಮಾಚಲ ಪ್ರದೇಶದ (Himachal Pradesh) ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ವೈಭವಿ ಉಪಾಧ್ಯಾಯ (Vaibhavi Upadhyay) ನಿಧನರಾಗಿದ್ದಾರೆ. ಪ್ರವಾಸ ಮಾಡುತ್ತಿದ್ದ ಕಾರು (Car) ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಪರಿಣಾಮ ಅವರು ಕೊನೆಯುಸಿರೆಳೆದಿದ್ದಾರೆ (Death). 32 ವಯಸ್ಸಿನ ವೈಭವಿ ಕಿರುತೆರೆ ಫೇಮಸ್ ನಟಿ. ಅಲ್ಲದೇ, ಇತ್ತೀಚೆಗೆ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದರು.

Vaibhavi Upadhyay 1

ಹಿಂದಿಯ ಜನಪ್ರಿಯ ಕಿರುತೆರೆ ಶೋಗಳಾದ ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಸೇರಿದಂತೆ ಸಾಕಷ್ಟು ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಹಿಂದಿ ಕಿರುತೆರೆಯಲ್ಲಿ ಜಾಸ್ಮೀನ್ ಎಂದೇ ಪರಿಚಿತರು. ಇದು ಅವರ ಪಾತ್ರದ ಹೆಸರಾಗಿತ್ತು. ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ನಿರ್ಮಾಪಕ ಈ ಸುದ್ದಿಯನ್ನು ಖಚಿತ ಪಡಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Vaibhavi Upadhyay 4

ನಿನ್ನೆ ಈ ಘಟನೆ ಸಂಭವಿಸಿದ್ದು, ನಂತರ ಅವರ ಮೃತದೇಹವನ್ನು ಮುಂಬೈಗೆ ತರಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಇದೆ. ವೈಭವಿ ನಿಧನಕ್ಕೆ ಹಿಂದಿ ಕಿರುತೆರೆ ಅನೇಕರು ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಅವರು ದೀಪಿಕಾ ಪಡುಕೋಣೆ ನಟನೆ ಛಪಾಕ್ ಹಾಗೂ ತಿಮಿರ್ ಎನ್ನುವ ಚಿತ್ರದಲ್ಲೂ ನಟಿಸಿದ್ದರು. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ

Vaibhavi Upadhyay 3

‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ನಿರ್ದೇಶಕ ದೆವೆನ್ ಭೊಜನಿ ಸಂತಾಪ ವ್ಯಕ್ತ ಪಡಿಸಿದ್ದು, ‘ಶಾಕಿಂಗ್, ಅದ್ಭುತ ನಟಿ ಹಾಗೂ ಸ್ನೇಹಿತೆ ಕೆಲವೇ ಗಂಟೆಗಳ ಹಿಂದಷ್ಟೇ ಕಾರು ಅಪಘಾತವಾಗಿ (Accident) ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೊ’ ಎಂದು ಬರೆದುಕೊಂಡಿದ್ದಾರೆ. ನಟಿ ರೂಪಾ ಗಂಗೂಲಿ ಕೂಡ ಟ್ವೀಟ್ ಮಾಡಿ ‘ಇದು ಘೋರ ಅನ್ಯಾಯ. ನಂಬೋಕೆ ಆಗುತ್ತಿಲ್ಲ’ ಎಂದಿದ್ದಾರೆ.

Share This Article