ಮೈಸೂರು: ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್ (Rohith) ಆರೋಗ್ಯವಾಗಿದ್ದಾರೆ. ದವಡೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಅಳವಡಿಸಲಾಗಿದೆ.
ಪಬ್ಲಿಕ್ ಟಿವಿಗೆ ರೋಹಿತ್ ಅಜ್ಜಿ ಶಕುಂತಲಾ ಪ್ರತಿಕ್ರಿಯಿಸಿ, 8 ತಿಂಗಳು ದ್ರವ ಆಹಾರ ಸೇವಿಸುವಂತೆ ವೈದ್ಯರು ಹೇಳಿದ್ದಾರೆ. ರೋಹಿತ್ ನೋಡಲು ಹೋದಾಗ ಥಂಬ್ಸ್ ಆಪ್ ಮಾಡಿ ಹೆದರಬೇಡಿ ಎಂದು ನಮಗೆ ಧೈರ್ಯ ತುಂಬುತ್ತಿದ್ದಾನೆ ಎಂದು ತಿಳಿಸಿದರು.
Advertisement
ರೋಹಿತ್ ತಾಯಿ ಛಾಯಾಲಕ್ಷ್ಮಿ ಅವರಿಗೆ ಗಂಭೀರ ಗಾಯವಾಗಿದೆ. ಇಂದು ಛಾಯಾಲಕ್ಷ್ಮಿಯನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡುತ್ತೇವೆ. ಅಪಘಾತವಾದಾಗ ರಸ್ತೆ ಬಳಿ ಬಂದು ರೋಹಿತ್ ನಿಂತಿದ್ದಾನೆ. ರಕ್ತ ಸುರಿಯುತ್ತಿದ್ದರೂ ಧೃತಿಗೆಡಲಿಲ್ಲ ಎಂದು ಹೇಳಿದರು.
Advertisement
Advertisement
ಯಶಸ್ ಆರೋಗ್ಯವಾಗಿದ್ದಾನೆ. ರೋಹಿತ್ ಮತ್ತು ಯಶಸ್ ಉತ್ತಮ ಗೆಳೆಯರಾಗಿದ್ದರು. ರೋಹಿತ್ ಥಂಬ್ಸ್ ಅಪ್ ಮಾಡುವ ಮೂಲಕ ನಮಗೆ ಧೈರ್ಯ ಹೇಳುತ್ತಿದ್ದಾನೆ ಎಂದು ಯಶಸ್ ತಾಯಿ ವಿನೋದಾ ತಿಳಿಸಿದರು. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?
Advertisement
ಹೊಸಹಳ್ಳಿ ಸಮೀಪದ ಆರಾಧನಾ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜನೆಗೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರೋಹಿತ್, ತಾಯಿ ಮತ್ತು ಸ್ನೇಹಿತರನ್ನು ಕಾಲೇಜು ಮುಖ್ಯಸ್ಥ ಯೋಗಣ್ಣ ಅವರ ಕಾರಿನಲ್ಲಿ ಪಾಂಡವಪುರದಿಂದ ಕರೆತರುತ್ತಿದ್ದಾಗ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಅವಘಡ ಸಂಭವಿಸಿದೆ. ಕೇರಳದ ಪ್ರವಾಸಿ ಬಸ್ಸೊಂದಕ್ಕೆ ಕಾರು ಮುಖಾಮುಖಿ ಡಿಕ್ಕಿ ಆಗಿದ್ದರಿಂದ ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ರೋಹಿತ್ ಅವರ ತಾಯಿ ಛಾಯಾಲಕ್ಷ್ಮಿ ಅವರ ಒಂದು ಕೈ ಮತ್ತು ಒಂದು ಕಾಲು ಮುರಿದಿದೆ. ಕಾರಿನಲ್ಲಿದ್ದ ಸ್ನೇಹಿತ ಯಶಸ್, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್ ಮತ್ತು ಶ್ರೀಕಾಂತ್ ಗಾಯಗೊಂಡಿದ್ದಾರೆ. ಶ್ರೀಕಾಂತ್ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಾಂಡವಪುರ ನಿವಾಸಿಯಾಗಿರುವ ರೋಹಿತ್ ಅವರಿಗೆ ‘ಒಂದಲ್ಲಾ ಎರಡಲ್ಲಾ’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿತ್ತು. ‘ಕಾಟೇರಾ’ ಚಿತ್ರದಲ್ಲೂ ಇವರು ಅಭಿನಯಿಸಿದ್ದಾರೆ.