ರಸ್ತೆ ಅಪಘಾತ: ನಟಿ ರುಬೀನಾ ದಿಲೈಕ್ ಆಸ್ಪತ್ರೆ ದಾಖಲು

Public TV
1 Min Read
Rubina Dilaik 3

ಕಿರುತೆರೆಯ ಖ್ಯಾತ ನಟಿ, ಹಿಂದಿಯ ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ರುಬೀನಾಗೆ ತೀವ್ರ ಗಾಯಗಳಾಗಿವೆ. ಬೆನ್ನಿಗೆ ಮತ್ತು ತಲೆಗೆ ಪೆಟ್ಟು ಬಿದ್ದು ಕಾರಣದಿಂದಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Rubina Dilaik 1

ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ರುಬೀನಾ ಕಾರಿಗೆ, ಹಿಂದಿನಿಂದ ಬಂದ ಟಾಟಾ ಯೋಧ ಟ್ರಕ್ ಗುದ್ದಿದೆ. ಪರಿಣಾಮ ರುಬೀನಾ ಅವರ ಬೆನ್ನು ಮತ್ತು ತೆಲೆಗೆ ಪೆಟ್ಟುಬಿದ್ದಿದೆ. ಫೋನ್ ನಲ್ಲಿ ಮಾತನಾಡುತ್ತಾ ಟ್ರಕ್ ಓಡಿಸುತ್ತಿದ್ದ ವ್ಯಕ್ತಿಯಿಂದಾಗಿ ಇದೀಗ ರುಬೀನಾ ಆಸ್ಪತ್ರೆ ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ ರುಬೀನಾ ಪತಿ, ನಟ ಅಭಿನವ್ ಶುಕ್ಲಾ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

Rubina Dilaik 2

ಈ ಕುರಿತು ರುಬೀನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಪಘಾತವಾದಾಗ ನಾನಾ ಆಘಾತಕ್ಕೊಳಗಾಗಿದ್ದೆ. ವೈದ್ಯಕೀಯ ಪರೀಕ್ಷೆಗಳ ನಂತರ ನಿರಾಳಳಾಗಿದ್ದೇನೆ. ಜಾಗರೂಕತೆಯನ್ನು ವಾಹನ ಚಲಾಯಿಸಿ. ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ’ ಎಂದು  ಅವರು ಮನವಿ ಮಾಡಿದ್ದಾರೆ.

 

ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಹಾಕಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ಕೊಡಿ, ಅಗತ್ಯ ಕ್ರಮಗಳನ್ನು ತಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅತ್ತ ರುಬೀನಾ ಅಭಿಮಾನಿಗಳು ‘ನೆಚ್ಚಿನ ನಟಿ ಬೇಗ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ.

Share This Article