Latest

ವಿಮಾನ ಹೊರಡೋದು ವಿಳಂಬ- ಹೈಜಾಕ್ ಆಗಿದೆ ಎಂದು ಮೋದಿಗೆ ಟ್ವೀಟ್ ಮಾಡಿದ ಪ್ರಯಾಣಿಕ

Published

on

Share this

ನವದೆಹಲಿ: ವಿಮಾನ ಹೊರಡುವುದು ತಡವಾಗಿದ್ದಕ್ಕೆ ಪ್ರಯಾಣಿಕರೊಬ್ಬರು ವಿಮಾನ ಹೈಜಾಕ್ ಆಗಿದೆ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ ಆತಂಕ ಸೃಷ್ಟಿಸಿದ ಘಟನೆ ಗುರುವಾರದಂದು ನಡೆದಿದೆ.

35 ವರ್ಷದ ಪ್ರಯಾಣಿಕ ನಿತಿನ್ ವರ್ಮಾ ಮುಂಬೈ-ದೆಹಲಿ ವಿಮಾದಲ್ಲಿ ಪ್ರಯಾಣಿಸುತ್ತಿದ್ದರು. ಆದ್ರೆ ವಿಮಾನ 3 ಗಂಟೆ ತಡವಾಗಿ 11.30ಕ್ಕೆ ಹೊರಟಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟಣೆ ಇದ್ದ ಕಾರಣ ವಿಮಾನ ಜೈಪುರದತ್ತ ಹೊರಟಿತು.

ಆದ್ರೆ ನಿತಿನ್ ವರ್ಮಾ, ಸರ್ ನಾವು ಜೆಟ್ ಏರ್‍ವೇಸ್‍ನಲ್ಲಿ ಕಳೆದ 3 ಗಂಟೆಗಳಿಂದ ಇದ್ದೇವೆ. ವಿಮಾನ ಹೈಜಾಕ್ ಆಗಿರುವಂತೆ ಅನ್ನಿಸುತ್ತಿದೆ. ದಯವಿಟ್ಟು ಸಹಾಯ ಮಾಡಿ ಅಂತ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದರು. ಇದರಿಂದ ಪ್ರಧಾನಿ ಕಾಯಾಲಯ, ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಭದ್ರತಾ ಏಜೆನ್ಸಿಗಳಿಗೆ ಅಲರ್ಟ್ ನೀಡಲಾಗಿತ್ತು.

ಜೈಪುರ ವಿಮಾನ ನಿಲ್ದಾಣ ತಲುಪಿದ ನಂತರ ನಿತಿನ್ ವರ್ಮಾ ಅವರನ್ನ ಸಿಐಎಸ್‍ಎಫ್ ಪೊಲೀಸರು ವಶಕ್ಕೆ ಪಡೆದು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಮುಂಬೈನಿಂದ ದೆಹಲಿಗೆ ಹೊರಡುವುದು ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

https://twitter.com/nitinvarma5n/status/857473006481809408?ref_src=twsrc%5Etfw&ref_url=http%3A%2F%2Fwww.ndtv.com%2Fdelhi-news%2Fbad-weather-diverts-flight-passenger-tweets-hijack-alert-to-pm-modi-1686931

https://twitter.com/nitinvarma5n/status/857477515647963136

ಈ ರೀತಿ ಟ್ವೀಟ್ ಮಾಡಿ ಆತಂಕ ಸೃಷ್ಟಿಸಿದ ಕಾರಣ ನಿತಿನ್ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜೈಪುರ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 503 ಹಾಗೂ 506ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಶುಕ್ರವಾರದಂದು ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ ಎಂದು ಜೈಪುರ ಪೂರ್ವ ಭಾಗದ ಡಿಸಿಪಿ ಕನ್ವರ್ ರಾಷ್ಟ್ರದೀಪ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement