LatestMain PostNational

ಬೀದಿಯಲ್ಲಿ ಪೆನ್ನು ಮಾರ್ತಿದ್ದ ಬಾಲಕಿಗೆ ಐಫೋನ್ ಗಿಫ್ಟ್ ಕೊಟ್ರು ತೇಜ್ ಪ್ರತಾಪ್ ಯಾದವ್!

ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಒಂದೊಳ್ಳೆ ಕೆಲಸ ಮಾಡಿರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಬೀದಿಗಳಲ್ಲಿ ಪೆನ್ನು ಮಾರಾಟ ಮಾಡ್ತಿದ್ದ ಬಡ ಕುಟುಂಬದ ಬಾಲಕಿಯೊಬ್ಬಳಿಗೆ ಐಫೋನ್ ಗಿಫ್ಟ್ ನೀಡಿದ್ದಾರೆ. ಇದರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

ಶನಿವಾರ ಸಂಜೆ ತನ್ನ ಸ್ನೇಹಿತರೊಂದಿಗೆ ತೇಜ್ ಪ್ರತಾಪ್ ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಪುಟ್ಟ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿರುವುದು ತೇಜ್ ಕಣ್ಣಿಗೆ ಬಿದ್ದಿದೆ. ತಮ್ಮ ಗಮನಕ್ಕೆ ಬಂದ ಕೂಡಲೇ ಅಲ್ಲಿಗೆ ತೆರಳಿರುವ ತೇಜ್ ಪ್ರತಾಪ್, ಕೆಲ ಹೊತ್ತುಆಕೆಯ ಜೊತೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿ, ಸಹಾಯಕ್ಕಾಗಿ ಕರೆ ಮಾಡುವಂತೆ ತಿಳಿಸಿದ್ದಾರೆ. ಆಗ ಬಾಲಕಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದಾಳೆ. ಈ ಬೆನ್ನಲ್ಲೇ ಪಕ್ಕದ ಮೊಬೈಲ್ ಶಾಪ್‍ಗೆ ಬಾಲಕಿಯನ್ನ ಕರೆದುಕೊಂಡು ಹೋಗಿದ ತೇಜ್, ಆಕೆಗೆ 50 ಸಾವಿರ ರೂ. ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

ಗಿಫ್ಟ್ ಸಿಕ್ಕ ಬಳಿಕ ಬಾಲಕಿ ಇದನ್ನು ತನ್ನ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡಿಕೊಳ್ಳುವ ಭರವಸೆ ನೀಡಿದ್ದಾಳೆ. ಬಾಲಕಿಯ ಮಾತಿಗೆ ಫಿದಾ ಆದ ತೇಜ್, ಏನಾದರೂ ಸಹಾಯ ಬೇಕಿದ್ದರೆ ಕರೆ ಮಾಡುವಂತೆ ಹೇಳಿ ಅಲ್ಲಿಂದ ತೆರಳಿದ ಪ್ರಸಂಗ ನಡೆದಿದೆ.

Leave a Reply

Your email address will not be published.

Back to top button