ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಕೆಲವೇ ದಿನ ಬಾಕಿ ಇದೆ. ಸೋಮವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸೀಟು ಹಂಚಿಕೆ (Mahagathbandhan Seat Sharing) ಬಿಕ್ಕಟ್ಟಿನ ನಡುವೆಯೂ 143 ಅಭ್ಯರ್ಥಿಗಳನ್ನ ಕಣಕ್ಕಿಳಿದೆ.
ನವೆಂಬರ್ 6 ಮೊದಲ ಮತ್ತು ನ.11 ರಂದು 2ನೇ ಹಂತದ ಚುನಾವಣೆ (Bihar Assembly Election 2025) ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಐಎನ್‌ಎಸ್ ವಿಕ್ರಾಂತ್ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ
ಮಹಾಘಟಬಂಧನ್ ಮೈತ್ರಿಕೂಟದ ಸೀಟು ಹಂಚಿಕೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಹೆಸರಿಗೆ ಇಂಡಿ ಒಕ್ಕೂಟವಾದ್ರೂ ಯಾರೂ ಒಗ್ಗಟ್ಟಿಲ್ಲ. ಬಿಹಾರ ಗೆಲ್ಲಲು ಯಾವುದೇ ಪ್ಲ್ಯಾನ್ ಮಾಡದ ಇಂಡಿ ನಾಯಕರ ನಡೆಯಿಂದ ಬಿಜೆಪಿ-ಜೆಡಿಯುಗೆ ಅಸ್ತ್ರ ಸಿಕ್ಕಂತಾಗಿದೆ. ಇಂಡಿ ನಾಯಕರಿಗೆ ಬಿಹಾರದ ವಿಧಾನಸಭಾ ಚುನಾವಣೆ ಗೆಲ್ಲಬೇಕು ಎನ್ನುವ ಆಸೆ ಇದ್ದಂತಿಲ್ಲ ಎಂಬ ಚರ್ಚೆ ಶುರುವಾಗ್ತಿದೆ. ಸೀಟು ಹಂಚಿಕೆ ಬಿಕ್ಕಟ್ಟು ನಡುವೆಯೇ ಆರ್‌ಜೆಡಿ-ಕಾಂಗ್ರೆಸ್‌ನಿಂದ ಪ್ರತ್ಯೇಕ ಪಟ್ಟಿ ರಿಲೀಸ್ ಆಗಿದೆ.
ವೈಶಾಲಿ ಜಿಲ್ಲೆಯ ರಘೋಪುರ್ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಕಣಕ್ಕಿಳಿದಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಮುಂದುವರಿದಿದ್ದ ಸೀಟು ಹಂಚಿಕೆ ಬಿಕ್ಕಟ್ಟಿನ ಕಾರಣ, ಆರ್‌ಜೆಡಿ ಇದುವರೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಆರ್‌ಜೆಡಿ ಒಂದು ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಇದನ್ನೂ ಓದಿ: GST 2.0 ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟ ಕೇಂದ್ರ – ಜಿಎಸ್‌ಟಿ ಉಳಿತಾಯ ಉತ್ಸವ ಸಾಧನೆ – ಯಾವ ವಸ್ತು, ಎಷ್ಟು ಸೇಲಾಯ್ತು?
ಇತ್ತ ಕಾಂಗ್ರೆಸ್ ಸೀಟು ಹಂಚಿಕೆ ಬಿಕ್ಕಟ್ಟು ಮಧ್ಯೆಯೆ 6 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ಒಟ್ಟಾರೆ 60 ಅಭ್ಯರ್ಥಿಗಳನ್ನು ಘೋಷಿಸಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಮಿತ್ರಪಕ್ಷಗಳು ಒಮ್ಮತಕ್ಕೆ ಬಂದಿಲ್ಲ. ಇದು ಮಹಾಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಅನಿಶ್ಚಿತತೆ ಮೂಡಿಸಿದೆ. 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೇ ದಿನವಾಗಿತ್ತು.