ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

Public TV
1 Min Read
RJ Mahvash and Yuzvendra Chahal

ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಜೊತೆ ಕಾಣಿಸಿಕೊಂಡಿದ್ದ ಬ್ಯೂಟಿ ಆರ್‌ಜೆ ಮಹ್ವಾಷ್ (RJ Mahvash) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಹಲ್‌ ಅವರೊಂದಿಗೆ ಡೇಟಿಂಗ್‌ ಸುದ್ದಿ ಹರಿದಾಡುತ್ತಿದ್ದಂತೆ ವದಂತಿಗಳಿಗೆ ಫುಲ್‌ಸ್ಟಾಪ್‌ ಹಾಕಿದ್ದಾರೆ. ನಾನು ಮದುವೆಯಾಗಲು ಬಯಸುವವರ ಜೊತೆಗೆ ಮಾತ್ರ ಡೇಟಿಂಗ್‌ ಮಾಡ್ತೀನಿ ಅಂತ ಸ್ಪಷ್ಟನೆ ನೀಡಿದ್ದಾರೆ.

 

View this post on Instagram

 

A post shared by Mahvash (@rj.mahvash)

ಕಳೆದ ತಿಂಗಳು ಮುಕ್ತಾಯಗೊಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಚಹಲ್‌ (Yuzvendra Chahal) ಜೊತೆಗೆ ಮಹ್ವಾಷ್‌ ಕಾಣಿಸಿಕೊಂಡಿದ್ದರು. ಆದ್ರೆ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಅವರಿಂದ ವಿಚ್ಛೇದನ ಪಡೆದ ಬಳಿಕ ಚಹಲ್‌ ಮತ್ತು ಮಹ್ವಾಷ್‌ ಅವರ ಡೇಟಿಂಗ್‌ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಹೈಪ್‌ ಕ್ರಿಯೆಟ್‌ ಮಾಡಿತ್ತು. ಅಲ್ಲದೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಹೇಳಿಕೆಗಳೂ ಕೇಳಿಬಂದಿತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಆರ್‌ಜೆ ಮಹ್ವಾಷ್‌ ಫುಲ್‌ಸ್ಟಾಪ್‌ ಹಾಕಿದ್ದಾರೆ.

yuzvendra chahal

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತಮಾಡಿದ ಅವರು, ಸದ್ಯಕ್ಕೆ ನಾನಿನ್ನೂ ಸಿಂಗಲ್, ಮದುವೆ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ಈ ಮೊದಲು ನನಗೆ ನಿಶ್ಚಿತಾರ್ಥ ಆಗಿತ್ತು, ಆ ಸಂಬಂಧವೂ ಮುರಿದುಬಿದ್ದಿತು. ಹಾಗಾಗಿ ನಾನು ಕ್ಯಾಷುವಲ್ ಡೇಟಿಂಗ್ ಹೋಗಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಮದುವೆಯಾಗಲು ಬಯಸಿದವರ ಜೊತೆ ಮಾತ್ರ ಡೇಟಿಂಗ್‌ಗೆ ಹೋಗಲು ಬಯಸುತ್ತೇನೆ. ಆದ್ರೆ ಸದ್ಯಕ್ಕೆ ಈ ಯಾವ ಯೋಚನೆಯೂ ನನಗಿಲ್ಲ ಎಂದಿದ್ದಾರೆ.

yuzvendra chahal 2

ತನಗೆ 19ನೇ ವಯಸ್ಸಿನಲ್ಲೇ ನಿಶ್ಚಿತಾರ್ಥ ಆಗಿತ್ತು, ಮದ್ವೆಗೆ 2 ವರ್ಷ ಸಮಯವಿತ್ತು. ಆದ್ರೆ ತಾನು 21 ವರ್ಷ ವಯಸ್ಸಿನವಳಿದ್ದಾಗ, ಮದುವೆ ಸಂಬಂಧವನ್ನು ರದ್ದುಗೊಳಿಸಿದೆ. ಏಕೆಂದರೆ ನನಗೆ ಹೊಂದಿಕೆಯಾಗುವಂತಹ ಒಳ್ಳೆಯ ಗಂಡ ಸಿಗಬೇಕು ಅನ್ನೋದೊಂದೇ ನನ್ನ ಬಯಕೆಯಾಗಿತ್ತು. ಮುಂದೆ ಅಂತಹ ತಪ್ಪು ಆಗದಂತೆ ನಾನು ನೋಡಿಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹ್ವಾಷ್‌ ಹೇಳಿಕೊಂಡಿದ್ದಾರೆ.

Share This Article