ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾ (Sri Lanka) ವಿಶ್ವಕಪ್ ಪಂದ್ಯದ (World Cup 2023) ವೇಳೆ ಪಾಕ್ ತಂಡ ಅಭಿಮಾನಿಗಳಿಂದ ಭಾರೀ ಬೆಂಬಲವನ್ನು ಪಡೆದುಕೊಂಡಿತು. ಆಟಗಾರರು ಈ ವೇಳೆ ತಾಯ್ನಾಡಿನಲ್ಲೇ ಆಡಿದಷ್ಟು ಸಂಭ್ರಮಿಸಿದ್ದಾರೆ. ಪ್ರೇಕ್ಷಕರ ಪ್ರೀತಿಯಿಂದ ನನಗೆ ರಾವಲ್ಪಿಂಡಿಯಲ್ಲಿಯೇ ಪಂದ್ಯವನ್ನು ಆಡುತ್ತಿರುವಂತೆ ಭಾಸವಾಯಿತು. ಇಡೀ ತಂಡಕ್ಕೂ ಈ ಪ್ರೀತಿ ಸಿಕ್ಕಿದೆ ಎಂದು ಪಾಕ್ ಆಟಗಾರ ರಿಜ್ವಾನ್ ಹೇಳಿದ್ದಾರೆ.
ಆಟದ ವೇಳೆ `ಜೀತೇಗಾ ಭಾಯಿ ಜೀತೇಗಾ ಪಾಕಿಸ್ತಾನ್ ಜೀತೇಗಾ’ ಎಂಬ ಘೋಷಣೆಗಳು ಆಟಗಾರರನ್ನು ಹುರಿದುಂಬಿಸಿದವು. ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರು ಶ್ರೀಲಂಕಾ ವಿರುದ್ಧದ ವಿಶ್ವಕಪ್ 2023 ಪಂದ್ಯದಲ್ಲಿ ತಮ್ಮ ದಾಖಲೆಯ 345 ರನ್ ಚೇಸ್‍ನಲ್ಲಿ 34 ನೇ ಓವರ್‍ನ ಅಂತ್ಯದ ನಂತರ ಈ ಧ್ವನಿ ಕೇಳಿ ಬಂದಿದೆ. ಈ ಬೆಂಬಲ ಆಟಗಾರರಿಗೆ ತಾವು ಪಾಕ್‍ನ ಹೊರಗಿದ್ದೇವೆ ಎಂಬ ಭಾವವನ್ನು ಅಳಿಸಿ ಹಾಕಿದೆ ಎಂದು ಆಟಗಾರರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ
Advertisement
Advertisement
ಶ್ರೀಲಂಕಾ ಕೂಡ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದೆ. ವಿಶೇಷವಾಗಿ ಕುಸಾಲ್ ಮೆಂಡಿಸ್ ಮತ್ತು ಸಮರವಿಕ್ರಮ ಅವರ ಬ್ಯಾಟಿಂಗ್ ವೇಳೆ ಅಭಿಮಾನಿಗಳಿಂದ ಭಾರೀ ಬೆಂಬಲ ಪಡೆದುಕೊಂಡರು.
Advertisement
ಟೂರ್ನಿಯಲ್ಲಿ ವಿಶ್ವದಾಖಲೆಯ ರನ್ ಚೇಸ್ ಮಾಡಿದ ಪಾಕಿಸ್ತಾನ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಜಯ ಸಾಧಿಸಿತು. ಗೆಲ್ಲಲು 345 ರನ್‍ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅಜೇಯ ಶತಕ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕದ ಆಟದಿಂದ 48.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 345 ರನ್ ದಾಖಲಿಸುವ ಮೂಲಕ ಸತತ ಎರಡನೇ ಜಯ ಸಾಧಿಸಿತು.
Advertisement
7.2 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಅಬ್ದುಲ್ಲಾ ಶಫಿಕ್ ಮತ್ತು ರಿಜ್ವಾನ್ ಮೂರನೇ ವಿಕೆಟಿಗೆ 156 ಎಸೆತಗಳಲ್ಲಿ 176 ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ಅಬ್ದುಲ್ಲಾ ಶಫಿಕ್ 113 ರನ್ (103 ಎಸೆತ, 10 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರೆ ಸೌದ್ ಶಕೀಲ್ 31 ರನ್ ಕೊನೆಯಲ್ಲಿ ಇಫ್ತಿಕಾರ್ ಅಹ್ಮದ್ ಔಟಾಗದೇ 22 ರನ್ (10 ಎಸೆತ, 4 ಬೌಂಡರಿ) ಹೊಡೆದರು. ಔಟಾಗದೇ 131 ರನ್ (121 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದ ಮೊಹ್ಮದ್ ರಿಜ್ವಾನ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.
ಟಾಸ್ ಗೆದ್ದು ಬ್ಯಾಟ್ ಮಾಡಿದ ಲಂಕಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಪಾತುಮ್ ನಿಸ್ಸಾಂಕ 51 ರನ್ (61 ಎಸೆತ, 7 ಬೌಂಡರಿ, 1 ಸಿಕ್ಸರ್), ಕುಶಲ್ ಪಿರೇರಾ 122 ರನ್ (77 ಎಸೆತ, 14 ಬೌಂಡರಿ, 6 ಸಿಕ್ಸರ್) ಕುಸಾಲ್ ಮೆಂಡಿಸ್ 108 ರನ್ (89 ಎಸೆತ, 11 ಬೌಂಡರಿ, 2 ಸಿಕ್ಸರ್) ಹೊಡೆದ ಬಳಿಕ ತಂಡದ ಮೊತ್ತ 9 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಅದರಲ್ಲೂ ಮೆಂಡಿಸ್ 40 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 67 ಎಸೆತಗಳಲ್ಲಿ ಶತಕ ಸಿಡಿಸಿದರು. ಇದನ್ನೂ ಓದಿ: World Cup 2023: ಇಂದು ಇಂಡೋ-ಅಫ್ಘಾನ್ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ
Web Stories