ಬೆಂಗಳೂರು: ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನಿಷೇಧ ಬ್ಯಾನರ್ ಹಾಕುವ ಮೂಲಕ ಸರ್ಕಾರವೇ ಚುನಾವಣಾ ದೃಷ್ಟಿಯಿಂದ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲಾ ಅನ್ನೋ ಬ್ಯಾನರ್ ಹಾಕಿದ್ದಾರೆ. ಬಜರಂಗದಳದವರು ಎಲ್ಲಾ ಮಳಿಗೆಯನ್ನು ಪಡೆದುಕೊಂಡಿದ್ದಾರೆ. ಇದೆಲ್ಲಾ ರಾಜಕೀಯ ಉದ್ದೇಶಕ್ಕೆ ಆಗುತ್ತಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ತಮ್ಮ ಸಹ ಸಂಘಟನೆಗಳ ಮೂಲಕ ಇದನ್ನು ಮಾಡಿಸುತ್ತಿದ್ದಾರೆ. ಸಂವಿಧಾನವೇ ನಮಗೆ ಎಲ್ಲಾ ಎಂದು ಅಧಿಕಾರಕ್ಕೆ ಬಂದವರು, ಈಗ ಇದನ್ನೆಲ್ಲಾ ನೋಡಿಕೊಂಡು ಮೌನವಾಗಿರುವುದು ನೋಡಿದರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಮಾರಿಕಾಂಬಾ ದೇವಸ್ಥಾನ ಕಟ್ಟಿಸಿದವನು ಒಬ್ಬ ಮುಸ್ಲಿಂ ಸೈನಿಕ. 1740ರಲ್ಲಿ ಮುಸ್ಲಿಂ ಸೈನಿಕನ ಕನಸಿನಲ್ಲಿ ಮಾರಿಕಾಂಬೆ ಬಂದು ದೇವಸ್ಥಾನ ಕಟ್ಟಲು ಹೇಳಿದಾಗ ದೇವಸ್ಥಾನ ನಿರ್ಮಾಣ ಆಗಿದ್ದು. ಅದು ನಿಜವಾದ ಸಾಮರಸ್ಯ. ಬಪ್ಪನಾಡು ದೇವಸ್ಥಾನ ಕಟ್ಟಿದ್ದು ಬಪ್ಪ ಬ್ಯಾರಿ ಎಂದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್
Advertisement
ಇಂದಿಗೂ ಬಪ್ಪ ಬ್ಯಾರಿ ವಂಶಸ್ಥರಿಂದ ಎಣ್ಣೆ ತಂದ ಮೇಲೆ ಪೂಜೆ ಪ್ರಾರಂಭವಾಗುತ್ತದೆ. ಇಂತಹ ಸಾಮರಸ್ಯಕ್ಕೆ ಇವರು ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ