ಕಾರವಾರ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿ ರಿವರ್ ರ‍್ಯಾಫ್ಟಿಂಗ್ ಮಾಡುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ನದಿಗೆ ಸಿಲುಕಿ, ಮುಳುಗುವ ಹಂತ ತಲುಪಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ 12 ಜನರ ಜೀವ ಉಳಿದಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದ್ದು, ಕೊಂಚದಲ್ಲೇ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ರಕ್ಷಣಾ ಕಾರ್ಯದಿಂದ 12 ಮಂದಿ ಬದುಕುಳಿಯುವಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ
Advertisement
Advertisement
ಹೌದು… ರಬ್ಬರ್ ಬೋಟ್‌ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್ ಮಾಡುವಂತಿಲ್ಲ. ಆದರೆ, ಖಾಸಗಿ ಆಯೋಜಕರು ಅನುಮತಿಯಿಲ್ಲದೇ 12 ಜನ ಪ್ರವಾಸಿಗರನ್ನು ರಿವರ್ ರ‍್ಯಾಫ್ಟಿಂಗ್ ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ವೇಳೆ ಬೋಟ್ ಮೇಲಿನ ಭಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದೆ. ಕೆಲ ಮಕ್ಕಳೂ ನೀರಿಗೆ ಬಿದ್ದಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬರಲಾಗಿ 12 ಮಂದಿ ಜೀವ ಉಳಿದಿದೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
Advertisement
ಘಟನೆ ಸಂಬಂಧ ಜೋಯಿಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.