ಚಿಕ್ಕಮಗಳೂರು: ದತ್ತಜಯಂತಿ (Datta Jayanti) ಹಿನ್ನೆಲೆ ಶಾಸಕ, ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T Ravi) ಮನೆ-ಮನೆಗೆ ತೆರಳಿ ಭಿಕ್ಷಾಟನೆ (Ritual Begging) ನಡೆಸಿದ್ದಾರೆ.
Advertisement
ನಗರದ ನಾರಾಯಣಪುರ, ರಾಘವೇಂದ್ರ ಮಠ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ ಅಡಿಕೆ-ಬೆಲ್ಲ ನೀಡಿದರು. ಇಂದು ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ನಾಳೆ ಇರುಮುಡಿ ರೂಪದಲ್ಲಿ ಅದನ್ನು ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: 108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್
Advertisement
Advertisement
ಪಡಿ ಸಂಗ್ರಹಕ್ಕೆ ಶಾಸಕ ಸಿ.ಟಿ. ರವಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳು ಸಾಥ್ ನೀಡಿದ್ದಾರೆ. ದತ್ತಪೀಠಕ್ಕೆ ಸಚಿವ ಸುನಿಲ್ ಕುಮಾರ್ (Sunil Kumar) ಭೇಟಿ ನೀಡಿ ದತ್ತಪಾದುಕೆ ದರ್ಶನ ಮಾಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷದ ದತ್ತಜಯಂತಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಕೂಡಿದೆ. ಇಷ್ಟು ದಿನ ದತ್ತಾತ್ರೇಯರ ಪಾದುಕೆ ದರ್ಶನ ಮಾಡಿಕೊಂಡು ಹೋಗುತ್ತಿದ್ದೇವು. ಆದರೆ, ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನು ನೋಡುವ ಭಾಗ್ಯ ಲಭಿಸಿದೆ. ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತರಿಗೆ ಅತ್ಯಂತ ಸಂತಸದ ದಿನ. ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದ್ದದ್ದೆ ದತ್ತಾತ್ರೇಯರ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆ ಜೊತೆ, ತ್ರಿಕಾಲ ಪೂಜೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಅದರಿಂದ ಬಿಜೆಪಿ ಸರ್ಕಾರ ಇಂದು ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಹಿಂದೂ ಅರ್ಚಕರಿಂದ ಪೂಜೆ ನೋಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ ಹುಲಿನೇ, ಮುಲ್ಲಾ ಅಂತ ಕರೆಯೋಕ್ಕಾಗಲ್ಲ: ಸಿ.ಟಿ ರವಿ
Advertisement
ಇದು ಹಿಂದೂಬಾಂಧವರಿಗೆ ಅತ್ಯಂತ ಸಂಭ್ರಮದ ದಿನ. ಇಂದು ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ಕ್ಯಾನ್ಸಲ್ ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲಿದ್ದು, ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ.