ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ರಿತು ಖಂಡೂರಿ ಶನಿವಾರ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉತ್ತರಾಖಂಡ ವಿಧಾನಸಭೆಯ ಐದನೇ ಸ್ಪೀಕರ್ ಆಗಿ ರಿತು ಖಂಡೂರಿ ಆಯ್ಕೆಯಾದರು. ರಿತು ಖಂಡೂರಿ ಅವರು 2017ರಲ್ಲಿ ಮೊದಲ ಬಾರಿಗೆ ಯಮಕೇಶ್ವರ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಈ ಹಿಂದೆ ರಿತು ಉತ್ತರಾಖಂಡ್ನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಟ್ದ್ವಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಸುರೇಂದ್ರ ಸಿಂಗ್ ನೇಗಿ ಅವರನ್ನು ಸೋಲಿಸಿದ್ದರು.
श्रीमती @RituKhanduriBJP जी को निर्विरोध विधानसभा अध्यक्ष निर्वाचित होने पर हार्दिक बधाई व शुभकामनाएं।
आज के दिन मातृशक्ति के रूप में पहली महिला स्पीकर मिलना उत्तराखण्ड राज्य के लिए गर्व की बात है। pic.twitter.com/GO6m2AEaEp
— Pushkar Singh Dhami (@pushkardhami) March 26, 2022
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಿತು ಖಂಡೂರಿ ಅವರನ್ನು ಅಭಿನಂದಿಸಿ ಅವರ ನಾಯಕತ್ವದಲ್ಲಿ ರಾಜ್ಯ ವಿಧಾನಸಭೆಯು ಹೊಸ ಇತಿಹಾಸವನ್ನು ರಚಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ: ಆಪ್ನಿಂದ ರೋಜ್ಗಾರ್ ಬಜೆಟ್ ಮಂಡನೆ
ಉತ್ತರಾಖಂಡದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಪುಷ್ಕರ್ ಸಿಂಗ್ ಧಾಮಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೆ ಹೈಕಮಾಂಡ್ ಮತ್ತೆ ಅವರಿಗೆ ಸಿಎಂ ಪಟ್ಟವನ್ನು ಕಟ್ಟಿದೆ. ಇದನ್ನೂ ಓದಿ: ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ