ಕೋಲ್ಕತ್ತಾ: ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಲೆಜೆಂಡ್ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಸರಿಗಟ್ಟಿದ್ದಾರೆ. ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ (Ritika Sajdeh) ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ.
Advertisement
ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಕೊಹ್ಲಿ 48.3ನೇ ಓವರ್‌ನಲ್ಲಿ ಶತಕ ಸಿಡಿಸಿದರು. ಆಗ ಮೈದಾನದಲ್ಲಿ ತುಂಬಿದ್ದ ಸಾವಿರಾರು ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಾ ಜೈಕಾರ ಹಾಕಿದರು. ಜೊತೆಗೆ ತಮ್ಮ ಮೊಬೈಲ್ ಟಾರ್ಚ್ ಹಿಡಿದು ಕೊಹ್ಲಿಗೆ ಶುಭಕೋರಿದರು. ಇದೇ ವೇಳೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ತಾವು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. ರೋಹಿತ್ ಶರ್ಮಾ ಪತ್ನಿ ರಿಯಾಕ್ಷನ್ ಇದೀಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video
Advertisement
Advertisement
ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.
Advertisement
ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಜಡೇಜಾ ಸ್ಪಿನ್ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ
ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.