ಬೆಂಗಳೂರು: ಹೋಟೆಲ್ (Hotel) ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಬಿಸಿ ಬಿಸಿ ಕಾಫಿ ಕುಡಿಬೇಕು, ದೋಸೆ ತಿನ್ಬೇಕು ಅನ್ಕೊಂಡವ್ರಿಗೆ ಹೊಸ ದರ ನಾಲಿಗೆ ಸುಡಲಿದೆ. ಹೋಟೆಲ್ ತಿಂಡಿ-ತಿನಿಸು ಮತ್ತಷ್ಟು ದುಬಾರಿಯಾಗಲಿದೆ.
Advertisement
ಹಾಲು, ಮೊಸರು, ತುಪ್ಪ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಟ್ಟಿದೆ. ಸದ್ದಿಲ್ಲದೆ ಹೋಟೆಲ್ ತಿಂಡಿ-ತಿನಿಸು ದರ ಹೆಚ್ಚಾಗಿದೆ. ಶೇ.15 ರಿಂದ 20 ರಷ್ಟು ದರ ಹೆಚ್ಚಳವಾಗಿದ್ದು, ಹೊಸ ದರದ ಫಲಕಗಳನ್ನು ಕೆಲ ಹೋಟೆಲ್‌ಗಳಲ್ಲಿ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ
Advertisement
Advertisement
ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿರುವ ಹಿನ್ನೆಲೆ, ಕೆಲ ಹೋಟೆಲ್‌ಗಳಲ್ಲಿ ದರ ಏರಿಕೆ ಮಾಡಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ದರ ಏರಿಕೆಗೆ ನಿರ್ಧರಿಸಲಾಗಿದೆ. ಚೈನೀಸ್, ನಾರ್ತಿಸ್ ತಿಂಡಿ ರೇಟ್ ಕೂಡ ಜಾಸ್ತಿಯಾಗಿದ್ದು, ಅದರ ಜೊತೆ ಜೊತೆಗೆ ತುಪ್ಪದ ರೇಟ್ ಸಹ ಜಾಸ್ತಿಯಾಗಿದೆ. ಗ್ಯಾಸ್ (Gas) ದರ 200 ರೂ. ಜಾಸ್ತಿ ಆಗಿದೆ, ಬಿಲ್ಡಿಂಗ್ ಮೇಲೆ ಜಿಎಸ್‍ಟಿಯಿಂದ (GST) ಹೊರೆ ಆಗ್ತಿದೆ. ಕಮರ್ಷಿಯಲ್ ಗ್ಯಾಸ್‍ಗೆ ಶೇ. 80 ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಕಾರ್ಮಿಕರ ಅಭಾವವಿದೆ, ಮಾರುಕಟ್ಟೆಯಲ್ಲಿ ವಸ್ತುಗಳ ದರ ಜಾಸ್ತಿ ಆಗಿದೆ ಅಂತ ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಐದೇ ನಿಮಿಷ ಸಾಕು – ಹುಳಿ ಅವಲಕ್ಕಿ ಮಾಡಿ ಸವಿಯಿರಿ
Advertisement
ಮಧ್ಯಮ ಹೋಟೆಲ್‌ಗಳ ದರ:
ರೈಸ್ ಬಾತ್: 30 ರಿಂದ 35-49 ರೂ.ಗೆ ಏರಿಕೆ., ಮಸಾಲ, ಸೆಟ್ ದೋಸೆ: 30 ರಿಂದ 40 ರೂ. ಏರಿಕೆ., ಹಾಫ್ ರೈಸ್: 25 ರಿಂದ 30 ರೂ. ಏರಿಕೆ., ಎರಡು ಚಪಾತಿ: 20 ರಿಂದ 30 ರೂ. ಏರಿಕೆ., ಪುಳಿಯೋಗರೆ: 30 ರಿಂದ 40 ರೂ. ಏರಿಕೆ., ಪೂರಿ: 30 ರಿಂದ 40 ರೂ. ಏರಿಕೆ., ಚಿತ್ರಾನ್ನ: 30 ರಿಂದ 35 ರೂ. ಏರಿಕೆ., ಅನ್ನ ಸಾಂಬಾರ್: 30 ರಿಂದ 35 ರೂ. ಏರಿಕೆ., ಮೊಸರನ್ನ: 30 ರಿಂದ 35 ರೂ. ಏರಿಕೆ., ಪರೋಟ: 30 ರಿಂದ 40 ರೂ. ಏರಿಕೆ ಆಗಿದೆ.