ಚಿಕ್ಕಮಗಳೂರು: ಮಳೆ ದೇವರೆಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿಯ ವಾರ್ಷಿಕ ಮಹಾರಥೋತ್ಸವವು (Rishyasringeshwara Maha Rathotsava) ವಿಜೃಂಭಣೆಯಿಂದ ನೆರವೇರಿದೆ.
ಇತಿಹಾಸ ಪ್ರಸಿದ್ಧ ಈ ದೇವಸ್ಥಾನದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಯನ್ನು ಮಳೆ ದೇವರೆಂದೆ ಸ್ಥಳೀಯರು ಹಾಗೂ ರಾಜ್ಯ-ದೇಶದಾದ್ಯಂತ ಭಕ್ತರು ನಂಬಿದ್ದಾರೆ. ಮಳೆ ಇಲ್ಲದ ಬರಗಾಲದ ಸಂದರ್ಭದಲ್ಲಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಮಳೆಯಾಗುವ ಪ್ರತೀತಿಯೂ ಇದೆ. ಹೀಗಾಗಿ ಪುರಾತನ ಕಾಲದಿಂದಲೂ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು ಮಹಾರಥೋತ್ಸವವೂ ನಡೆಯುತ್ತಿದೆ. ಇದನ್ನೂ ಓದಿ: ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ಸಂಪನ್ನ
ಸೋಮವಾರ ಜಾತ್ರಾ ಧ್ವಜಾರೋಹಣ ನಡೆದಿದ್ದು ಇಂದು ಮಹಾರಥೋತ್ಸವ ನಡೆದಿದೆ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧನ್ಯರಾಗಿದ್ದಾರೆ. ಜಾತ್ರಾ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದಿದ್ದು ರಥೋತ್ಸವದ ನಂತರ ಕಿಗ್ಗಾ ಸುತ್ತಮುತ್ತಲಿನ ಊರುಗಳಲ್ಲಿ ಜಾತ್ರೆಯ ಹಬ್ಬವು ನಡೆಯಲಿದೆ. ಬೆಳಗ್ಗೆ ಸ್ವಲ್ಪ ದೂರದವರೆಗೆ ಎಳೆದ ಬ್ರಹ್ಮರಥವನ್ನು ರಾತ್ರಿ ಭಕ್ತಾಧಿಗಳು ಪೂರ್ಣವಾಗಿ ರಾಜಾಬೀದಿಗಳಲ್ಲಿ ಎಳೆದು ಸ್ವಾಮಿಯನ್ನು ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ.
ನಂತರ ತಮ್ಮ ಮನೆಗಳಲ್ಲಿ ಹಬ್ಬದೂಟ ಮಾಡಿ ಸಂಬಂಧಿಕರು, ಸ್ನೇಹಿತರೊಡನೆ ಊಟ ಮಾಡುತ್ತಾರೆ. ಊರ ಜಾತ್ರೆಗೆ ಹೊರ ಊರಗಳಲ್ಲಿ ಕೆಲಸದ ನಿಮಿತ್ತ ನೆಲಸಿರುವ ಎಲ್ಲರೂ ಬಂದು ಊರಿನ ದೇವರ ದರ್ಶನ ಮಾಡಿ ನಮಸ್ಕರಿಸಿ ಹೋಗುವುದು ವಾಡಿಕೆ. ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಸಲ್ಲಿಸುತ್ತದೆ. ಈ ದೇವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ಧೈವಗಳಲ್ಲೊಂದು. ಇದನ್ನೂ ಓದಿ: ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ